ಗೋಣಿಕೊಪ್ಪಲು, ಅ. 19: ಹುದಿಕೇರಿ ಜನತಾ ಪ್ರೌಢಶಾಲಾ ತಂಡವು ಜಿಲ್ಲಾ ಮಟ್ಟದ ಆದಿವಾಸಿ ಕಬಡ್ಡಿ ಫೈನಲ್ನಲ್ಲಿ ಜಯಗಳಿಸಿದ್ದು, ಶಿರಸಿಯ ದೇವನಹಳ್ಳಿ ಪ್ರೌಢಶಾಲಾ ಆಶ್ರಯದಲ್ಲಿ ನ. 3 ರಂದು ನಡೆಯಲಿರುವ ರಾಜ್ಯ ಮಟ್ಟದ ಆದಿವಾಸಿ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಲಿದೆ.
ಹುದಿಕೇರಿ ಜನತಾ ಪ್ರೌಢಶಾಲಾ ತಂಡವು ಕಳೆದ ತಿಂಗಳು ತಿತಿಮತಿ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಜರುಗಿದ ಜಿಲ್ಲಾ ಮಟ್ಟದ ಆದಿವಾಸಿ ಕಬಡ್ಡಿ ಫೈನಲ್ನಲ್ಲಿ ಅತಿಥೇಯ ತಿತಿಮತಿ ತಂಡವನ್ನು 35-5 ಪಾಯಿಂಟ್ಗಳ ಅಂತರದಿಂದ ಸೋಲಿಸಿ ಜಿಲ್ಲಾ ಮಟ್ಟದ ಟ್ರೋಫಿ ಗೆದ್ದುಕೊಂಡಿತ್ತು.
ಹುದಿಕೇರಿ ಆದಿವಾಸಿ ತಂಡದ ತರಬೇತುದಾರರಾಗಿ ಚಪ್ಪಂಡ ಸುಬ್ರಮಣಿ ವಿಶ್ವನಾಥ್ ಕಾರ್ಯನಿರ್ವಹಿಸಿದ್ದಾರೆ.