ವೀರಾಜಪೇಟೆ, ಅ. 18: ಬೆಳೆಹಾನಿ ಪರಿಹಾರದಲ್ಲಿ ಯಾವ ಗ್ರಾಮಗಳು ಬಿಟ್ಟುಹೋಗಿದೆ ಅಂತ ಗ್ರಾಮಗಳ ಪಟ್ಟಿಮಾಡಿ ಸರಕಾರಕ್ಕೆ ಕಳುಹಿಸಿಕೊಡಿ, ಅನುಷ್ಠಾನಕ್ಕೆ ತರುವ ವ್ಯವಸ್ಥೆಯನ್ನು ನಾನು ಮಾಡುತ್ತೇನೆÉ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಹಾಗೂ ವಸತಿ ಸಚಿವ ವಿ. ಸೋಮಣ್ಣ ಹೇಳಿದರು.ತೋರದ ಭೂಕುಸಿತದಲ್ಲಿ ತನ್ನ ಪತ್ನಿ, ಮಕ್ಕಳು ಹಾಗೂ ಕುಟುಂಬದವರನ್ನು ಕಳೆದುಕೊಂಡ ಪ್ರಭುಕುಮಾರ್ ಹಾಗೂ ಹರೀಶ್ ಅವರಿಗೆ ಸಾಂತ್ವನ ಹೇಳಿ ಸರ್ಕಾರದ ಪರಿಹಾರ ಮೊತ್ತವನ್ನು ವಿತರಿಸಿ ಮಾತನಾಡಿದ ಸಚಿವರು, ಪ್ರಕೃತಿ ವಿಕೋಪದಲ್ಲಿ ಆಗಿರುವ ಅನಾಹುತಗಳ ಬಗ್ಗೆ ಈಗಾಗಲೇ ಜಿಲ್ಲಾಡಳಿತದೊಂದಿಗೆ ಚರ್ಚಿಸಿ; ಪರಿಹಾರ ಕಾರ್ಯಗಳನ್ನು ಮಾಡಲಾಗಿದೆ ಎಂದರು. ಸರ್ಕಾರ ಏನೇ ಮಾಡಿದರು ಕಳೆದುಕೊಂಡ ಕುಟುಂಬವನ್ನು ಹಿಂತಿರುಗಿಸಿ ಕೊಡಲು ಸಾಧ್ಯವಿಲ್ಲ. ಸಂಪೂರ್ಣ ಮನೆ ಕಳೆದುಕೊಂಡವರಿಗೆ ಪುನರ್ವಸತಿ ಕಲ್ಪಿಸಿಕೊಡಲು ಈಗಾಗಲೆ ರೂ. 1 ಲಕ್ಷ ನೀಡಲಾಗಿದೆ. ಉಳಿದ 4 ಲಕ್ಷವನ್ನು ಹಂತ ಹಂತವಾಗಿ ನೀಡಲಾಗುವದು. ಕೇಂದ್ರ ಸರ್ಕಾರದ ಪರಿಹಾರ ನಿಧಿಯ ಜತೆಗೆ ರಾಜ್ಯ ಸರ್ಕಾರ 10 ಸಾವಿರ ಹೆಚ್ಚುವರಿಯಾಗಿ ನೀಡುತ್ತಿದೆ. ಅಂಗಡಿಗಳನ್ನು ಕಳೆÀದುಕೊಂಡವರಿಗೆ ರೂ. 25 ಸಾವಿರ ನೀಡಲಾಗಿದೆ. ನಮ್ಮ ಸರ್ಕಾರ ಮೂಲಭೂತ ಸೌಕರ್ಯ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಎಲ್ಲರ ಶ್ರೇಯೋಭಿವೃದ್ಧಿಗೆ ಶ್ರಮಿಸಲಾಗುವದು ಎಂದು ಹೇಳಿದರು.
ಶಾಸಕರು ಆಣೆ ಪ್ರಮಾಣದಂತಹ ಚಾಳಿಯನ್ನು ಬಿಡಬೇಕು. ಈ ತರ ಆದಾಗ ಯಾರಿಗೂ ಬೆಲೆ ಇಲ್ಲ. ಇಂತಹ ಸಂದರ್ಭ ಸನ್ನಿವೇಶಗಳು ಜನರನ್ನು ಗೋಂದಲಕ್ಕೀಡು ಮಾಡುತ್ತವೆ.
(ಮೊದಲ ಪುಟದಿಂದ) ಎಚ್. ವಿಶ್ವನಾಥ್ ಹಿರಿಯ ರಾಜಕಾರಣಿ, ಸಾ.ರಾ. ಮಹೇಶ್ ಕೂಡ ಪ್ರಬುದ್ಧ ರಾಜಕಾರಣಿ ಅಂಥವರು ಈ ರೀತಿಯಾಗಿ ನಡೆದುಕೊಳ್ಳುವದು ಸರಿಯಲ್ಲ ಎಂದು ಸೋಮಣ್ಣ ಪ್ರತಿಕ್ರಿಯಿಸಿದರು.
ಇದೇ ಸಂದರ್ಭದಲ್ಲಿ ವೀರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಸಿಇಒ ಲಕ್ಷ್ಮಿಪ್ರಿಯಾ, ಉಪವಿಭಾಗಾಧಿಕಾರಿ ಜವರೇಗೌಡ, ತಹಶೀಲ್ದಾರ್ ಮಹೇಶ್, ಜಿ.ಪಂ ಸದಸ್ಯರಾದ ಅಚ್ಚಪಂಡ ಮಹೇಶ್, ಶಶಿ ಸುಬ್ರಮಣಿ ಮತ್ತಿತರರು ಉಪಸ್ಥಿತರಿದ್ದರು.
ಆಗಸ್ಟ್ ತಿಂಗಳಲ್ಲಿ ಸುರಿದ ಭಾರೀ ಮಳೆಗೆ ವೀರಾಜಪೇಟೆ- ಕೇರಳ ರಾಜ್ಯ ಹೆದ್ದಾರಿಯು ಕೆಲವು ಕಡೆಗಳಲ್ಲಿ ಕುಸಿದು ಸಂಪೂರ್ಣ ಹಾನಿಗೊಳ ಗಾದ ಸ್ಥಳಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಅಂತರ್ರಾಜ್ಯ ಹೆದ್ದಾರಿ ಅರಣ್ಯದೊಳಗೆ ಹಾದು ಹೋಗುತ್ತಿರುವದರಿಂದ ಅರಣ್ಯಾಧಿ ಕಾರಿಗಳು ರಸ್ತೆ ಅಭಿವೃದ್ದಿಗೆ ಸಹಕಾರ ನೀಡುತ್ತಿಲ್ಲ.
ಅವರ ವಾಹನಗಳು ಓಡಾಡಲು ರಸ್ತೆ ಬೇಕು. ಅವರ ಒಂದಿಂಚು ಜಾಗ ಮುಟ್ಟಲು ಬಿಡುವದಿಲ್ಲ ಎಂದು ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಉಸ್ತುವಾರಿ ಸಚಿವರಿಗೆ ತಿಳಿಸಿದರು. ಸಚಿವರು ಮಾತನಾಡಿ, ಅಂತರಾಜ್ಯ ಹೆದ್ದಾರಿ ಆಗಿರುವ ದರಿಂದ ತುರ್ತಾಗಿ ಕಾಮಗಾರಿಗಳನ್ನು ತೆಗೆದುಕೊಳ್ಳ ಲಾಗಿದೆ.
ಕೆಲವು ಅಧಿಕಾರಿಗಳು ಜಡತ್ವ ಹೊಂದಿದ್ದಾರೆ. ಅವರನ್ನು ಯಾವ ರೀತಿ ಭೇದಿಸಬೇಕು ಎಂಬುದು ಗೊತ್ತಿದೆ. ರಸ್ತೆಯ ಗಾಂಭೀರ್ಯತೆ ಗೊತ್ತಿರುವವರು ಈ ರೀತಿ ಮಾಡುವದಿಲ್ಲ.
ಬೆಂಗಳೂರಿಗೆ ಹೋದ ಮೇಲೆ ಹಿರಿಯ ಅರಣ್ಯ ಅಧಿಕಾರಿಗಳನ್ನು ಕಚೇರಿಗೆ ಕರೆಸಿ ಮಾತುಕತೆ ನಡೆಸಿ ರಸ್ತೆಗೆ ಒಂದು ಕಾಯಕಲ್ಪ ನೀಡಲಾಗುವದು ಎಂದು ಹೇಳಿದರು.
-ವಾಸು, ರಜಿತಾ ಕಾರ್ಯಪ್ಪ