ನಾಪೆÇೀಕ್ಲು, ಅ. 18: ಜಗತ್ತಿನಲ್ಲಿ ಎಲ್ಲಾ ದಾನಗಳಿಗಿಂತ ರಕ್ತದಾನ ಶ್ರೇಷ್ಠವಾದುದು. ಇದರಿಂದ ಮಾತ್ರ ಒಂದು ವ್ಯಕ್ತಿಯ ಜೀವ ಉಳಿಸಲು ಸಾಧ್ಯ ಎಂದು ಮಡಿಕೇರಿ ಜಿಲ್ಲಾ ರಕ್ತನಿಧಿ ಕೇಂದ್ರದ ವೈದ್ಯ ಡಾ. ಕರುಂಬಯ್ಯ ಹೇಳಿದರು.
ನಾಪೆÇೀಕ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಾಪೆÇೀಕ್ಲುವಿನ ಪಿ.ಪಿ. ಫೌಂಡೇಷನ್ ವತಿಯಿಂದ ಏರ್ಪಡಿಸಲಾಗಿದ್ದ ಎರಡನೇ ವರ್ಷದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿ.ಪಿ. ಫೌಂಡೇಷನ್‍ನ ಅಧ್ಯಕ್ಷ ಶೌಕತ್ ಅಲಿ ವಹಿಸಿದ್ದರು.
ವೇದಿಕೆಯಲ್ಲಿ ನಾಪೆÇೀಕ್ಲು ಸಮುದಾಯ ಆರೋಗ್ಯ ಕೇಂದ್ರದ ವೈದ್ಯ ಡಾ. ಮದನ್ ಮೋಹನ್, ಡಾ. ಪೂವಯ್ಯ, ಬಿದ್ದಾಟಂಡ ಮೇರಿ ಚಿಟ್ಟಿಯಪ್ಪ, ಟಿ.ಎ. ಅಬ್ದುಲ್ ರಹಿಮಾನ್, ನಾಪೆÇೀಕ್ಲು ಪಟ್ಟಣ ಮುಸ್ಲಿಂ ಜಮಾಅತ್ ಅಧ್ಯಕ್ಷ ಸಲೀಂ ಹಾರೀಸ್, ಎಂ.ಎ. ಮನ್ಸೂರ್ ಅಲಿ, ಸಿ.ಹೆಚ್. ಅಹಮ್ಮದ್, ಓ.ಎಸ್.ಎಫ್. ಅಧ್ಯಕ್ಷ ನೌಫಲ್ ಮತ್ತು ಸದಸ್ಯರು ಇದ್ದರು.