ತಿತಿಮತಿ, ಅ. 18: ವಿದ್ಯಾರ್ಥಿಗಳು ಕಲಿಕೆಯೊಂದಿಗೆ ಕಲೆಯ ಅಭ್ಯಾಸ ಮಾಡಿ ಜಾನಪದ ಕಲೆಗಳನ್ನು ಉಳಿಸಲು ಶ್ರಮಿಸಬೇಕೆಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಟಿ. ದರ್ಶನ ಹೇಳಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ತಿತಿಮತಿ ಮೊರಾರ್ಜಿ ಶಾಲೆಯಲ್ಲಿ ಆಯೋಜಿಸಿದ್ದ ಗಿರಿಜನ ಉಪಯೋಜನೆಯಡಿ ಗುರು-ಶಿಷ್ಯ ಪರಂಪರೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಭಾರತ ಕಲೆಗಳ ತವರೂರು, ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ನಮ್ಮ ದೇಶ ವಿಶ್ವಕ್ಕೆ ಮಾದರಿಯಾಗಿರುವ ಕಲೆ ಸಂಸ್ಕøತಿ ಆಚಾರ ವಿಚಾರ ಹೊಂದಿದೆ ಎಂದರು. ವಿದ್ಯಾರ್ಥಿಗಳು ಜೀವನದಲ್ಲಿ ಒಳ್ಳೆಯ ಸುಸಂಸ್ಕøತಿ ವಿಚಾರಗಳನ್ನು ಕಲಿಯಬೇಕು. ಗುರು ಹಿರಿಯರಿಗೆ ಗೌರವ ನೀಡುವದನ್ನು ರೂಢಿಸಿಕೊಳ್ಳಬೇಕೆಂದು ತಿಳಿಸಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಾಡುನುಡಿ ಭಾಷೆ, ಸಂಸ್ಕøತಿಗಾಗಿ ಕೆಲಸ ಮಾಡುತ್ತಿದೆ. ಇದಕ್ಕಾಗಿ ಅನೇಕ ಯೋಜನೆಗಳು, ಕಾರ್ಯಕ್ರಮಗಳು ಇಲಾಖೆ ಯಲ್ಲಿದ್ದು, ಅವುಗಳ ಸದುಪಯೋಗ ಆಗಬೇಕೆಂದರು. ಗುರು-ಶಿಷ್ಯ ಪರಂಪರೆ ಯೋಜನೆಯಡಿ 6 ತಿಂಗಳುಗಳ ಕಾಲಾವಕಾಶದಲ್ಲಿ ಜನಪದ ಕಲೆಗೆ ಸಂಬಂಧಿಸಿ ದಂತೆ ತರಬೇತಿ ನೀಡಲಾಗುವದೆಂದು ತಿಳಿಸಿದರು. ವೇದಿಕೆಯಲ್ಲಿ ಮೊರಾರ್ಜಿ ಶಾಲಾ ಪ್ರಾಂಶುಪಾಲೆ ನೀತು, ಶಿಕ್ಷಕ ವರ್ಗದವರು, ಗುರು-ಶಿಷ್ಯ ಪರಂಪರೆ ಗುರು ಗಿರೀಶ್ ಇದ್ದರು. ಮಣಜೂರು ಮಂಜುನಾಥ್ ಸ್ವಾಗತಿಸಿ, ವಂದಿಸಿದರು.