ಗೋಣಿಕೊಪ್ಪ ವರದಿ, ಅ. 18: ಕುಂದ ಬೆಟ್ಟದಲ್ಲಿ ಆಚರಿಸಲ್ಪಡುವ ಕುಂದ ಬೋಡ್‍ನಮ್ಮೆ ಸಡಗರ, ಸಂಭ್ರಮದಿಂದ ನಡೆಯಿತು. ನೂರಾರು ಗ್ರಾಮಸ್ಥರು ಒಂದಾಗಿ ಬೆಟ್ಟವೇರಿ ಮಹಾದೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಹಬ್ಬ ಆಚರಿಸಿದರು. ಆ ಮೂಲಕ ದಕ್ಷಿಣ ಕೊಡಗಿನ ಬೋಡ್‍ನಮ್ಮೆ ಆಚರಣೆಗೆ ಚಾಲನೆ ನೀಡಲಾಯಿತು.
ಕಾವೇರಿ ತೀರ್ಥೋದ್ಭವದ ಮಾರನೇ ದಿನ ನಡೆಯುವ ನಮ್ಮೆಯನ್ನು ಶುಕ್ರವಾರ ಮಧ್ಯಾಹ್ನ ಕುಂದ ಗ್ರಾಮದ ಅಂಬಲದಿಂದ ಗ್ರಾಮಸ್ಥರು ದೇವರ ಆಚರಣೆಯ ಕುದುರೆ ಹೊತ್ತು ಹಬ್ಬ ಆಚರಿಸಿದರು. ಭಕ್ತಾದಿಗಳು ಬಿದಿರಿನಿಂದ ಮಾಡಿದ ಎರಡು ಕುದುರೆಯನ್ನು ಹೊತ್ತು ಹಬ್ಬ ಆಚರಿಸಿದರು. ದೇವರ ಹಾಡು ಹೇಳಿಕೊಂಡು ಕುಣಿದರು. ಮಹಿಳೆಯರು, ಮಕ್ಕಳು ಕೂಡ ಭಾಗವಹಿಸಿದ್ದರು.
ತೀರ್ಥೋದ್ಭವ ಸಂದರ್ಭ ಮತ್ತೆ ಕುಂದ ಬೋಡ್‍ನಮ್ಮೆಯ ಮೂಲಕ ಚಾಲನೆ ಪಡೆಯುತ್ತದೆ. ಇದರಂತೆ ನಮ್ಮೆಗೆ ಚಾಲನೆ ನೀಡಲಾಯಿತು. ಬೆಟ್ಟದ ಮೇಲಿರುವ ಮುಕ್ಕಾಟಿ ಬಾಣೆಯಲ್ಲಿ ಒಂದಾಗಿ ಕುಣಿದರು.
ತಲಕಾವೇರಿಯಿಂದ ತೀರ್ಥವನ್ನು ತಂದು ಪೂಜಿಸಿ, ದೇವರಿಗೆ ವಿವಿಧ ಹೆಸರಿನಲ್ಲಿ ಬೇಡುವ ಮೂಲಕ ಆಚರಿಸಿದರು.
ಹಿಂದೆ ಪಾಂಡವರು ಅಜ್ಞಾತ ವಾಸದಲ್ಲಿದ್ದಾಗ ಇಲ್ಲಿ ತಲೆಮರಿಸಿಕೊಂಡಿದ್ದರು ಎಂಬ ಪ್ರತೀತಿಯಂತೆ, ಪಾಂಡವರು ಕಲ್ಲಿನಲ್ಲಿ ದೇಗುಲ ನಿರ್ಮಿಸಿ ಈಶ್ವರನನ್ನು ಪೂಜೆಸುತ್ತಿದ್ದ ಕಲ್ಲಿನ ದೇಗುಲದಲ್ಲಿ ಪೂಜೆ ಸಲ್ಲಿಸಲಾಯಿತು. ಮನೆಯಪಂಡ ಕುಟುಂಬ ದೇವತಕ್ಕರಾಗಿ, ಸಣ್ಣುವಂಡ ಕುಟುಂಬ ಭಂಡಾರ ತಕ್ಕರಾಗಿ ,ಸ್ಥಳಿಯ ಕುಟುಂಬ ಹಾಗೂ ಗ್ರಾಮಸ್ಥರು ಆಚರಣೆಯಲ್ಲಿ ಪಾಲ್ಗೊಂಡರು.
ಮಳೆ ನಡುವೆ ಆಚರಣೆ : ಮದ್ಯಾಹ್ನ ಸುರಿದ ಧಾರಾಕಾರ ಮಳೆಯಲ್ಲಿ ನಮ್ಮೆ ಆಚರಿಸಲಾಯಿತು. ದೇವರ ಹಾಡು ಹೇಳಿಕೊಂಡು ಮಳೆಯನ್ನು ಮರೆವಾಸದಲ್ಲಿದ್ದಾಗ ಇಲ್ಲಿ ತಲೆಮರಿಸಿಕೊಂಡಿದ್ದರು ಎಂಬ ಪ್ರತೀತಿಯಂತೆ, ಪಾಂಡವರು ಕಲ್ಲಿನಲ್ಲಿ ದೇಗುಲ ನಿರ್ಮಿಸಿ ಈಶ್ವರನನ್ನು ಪೂಜೆಸುತ್ತಿದ್ದ ಕಲ್ಲಿನ ದೇಗುಲದಲ್ಲಿ ಪೂಜೆ ಸಲ್ಲಿಸಲಾಯಿತು. ಮನೆಯಪಂಡ ಕುಟುಂಬ ದೇವತಕ್ಕರಾಗಿ, ಸಣ್ಣುವಂಡ ಕುಟುಂಬ ಭಂಡಾರ ತಕ್ಕರಾಗಿ ,ಸ್ಥಳಿಯ ಕುಟುಂಬ ಹಾಗೂ ಗ್ರಾಮಸ್ಥರು ಆಚರಣೆಯಲ್ಲಿ ಪಾಲ್ಗೊಂಡರು.
ಮಳೆ ನಡುವೆ ಆಚರಣೆ : ಮದ್ಯಾಹ್ನ ಸುರಿದ ಧಾರಾಕಾರ ಮಳೆಯಲ್ಲಿ ನಮ್ಮೆ ಆಚರಿಸಲಾಯಿತು. ದೇವರ ಹಾಡು ಹೇಳಿಕೊಂಡು ಮಳೆಯನ್ನು ಮರೆಯುವ ಪ್ರಯತ್ನ ಮಾಡಿದರು. ದುಡಿ, ಡೋಲು ಬಾರಿಸಿಕೊಂಡು ಹಾಡು ಹೇಳಿದರು. ಸುಮಾರು 2 ಇಂಚಿಗೂ ಅಧಿಕ ಮಳೆಯಾದ ಕಾರಣ ಮಳೆಯನ್ನು ಲೆಕ್ಕಿಸದೆ ಹಬ್ಬ ಆಚರಿಸಿದರು. ಬೆಟ್ಟದಿಂದ ಇಳಿಯುವಾಗ ಜಾರಿ ಬಿದ್ದು ಸಂಭ್ರಮಿಸಿದರು.
ವರದಿ - ಸುದ್ದಿಮನೆ
- ಚಿತ್ರ ಕೃಪೆ - ಮಾಚು.
ಯುವ ಪ್ರಯತ್ನ ಮಾಡಿದರು. ದುಡಿ, ಡೋಲು ಬಾರಿಸಿಕೊಂಡು ಹಾಡು ಹೇಳಿದರು. ಸುಮಾರು 2 ಇಂಚಿಗೂ ಅಧಿಕ ಮಳೆಯಾದ ಕಾರಣ ಮಳೆಯನ್ನು ಲೆಕ್ಕಿಸದೆ ಹಬ್ಬ ಆಚರಿಸಿದರು. ಬೆಟ್ಟದಿಂದ ಇಳಿಯುವಾಗ ಜಾರಿ ಬಿದ್ದು ಸಂಭ್ರಮಿಸಿದರು.
ವರದಿ - ಸುದ್ದಿಮನೆ
- ಚಿತ್ರ ಕೃಪೆ - ಮಾಚು.