ನಾಪೆÇೀಕ್ಲು, ಅ. 18: 1785ರಲ್ಲಿ ನರಮೇಧ ದುರಂತ ನಡೆದ ಸಮೀಪದ ದೇವಟಿ ಪರಂಬುವಿನಲ್ಲಿ ರಾಷ್ಟ್ರೀಯ ಸ್ಮಾರಕ ನಿರ್ಮಿಸುವ ನಿಟ್ಟಿನಲ್ಲಿ ಗುರುತಿಸಿರುವ ಎರಡು ಸ್ಥಳಗಳಿಗೆ ಧಾರ್ಮಿಕ ಪಾವಿತ್ರ್ಯತೆ ಮತ್ತು ಆಧ್ಯಾತ್ಮಿಕ ಹಾಗೂ ಪಾರಮಾರ್ತಿಕ ಸಂಸ್ಕಾರ ನೀಡುವ ನಿಟ್ಟಿನಲ್ಲಿ ಕಾವೇರಿ ಸಂಕ್ರಮಣದ ಅಂಗವಾಗಿ ಕಾವೇರಿ ತೀರ್ಥೋದ್ಭವದ ನಂತರ ತೀರ್ಥವನ್ನು ಪೆÇ್ರೀಕ್ಷಣೆ ಮಾಡಿ ಸ್ಥಳ ಶುದ್ಧಿ ನಡೆಸಿದ ನಂತರ ಸಿಎನ್‍ಸಿ ಅಧ್ಯಕ್ಷ ನಂದಿನೆರವಂಡ ನಾಚಪ್ಪ ನೇತೃತ್ವದಲ್ಲಿ ಭಕ್ತಿ ಗೌರವಗಳೊಂದಿಗೆ ಬೊತ್ತ್ ನೆಡುವ ಕಾರ್ಯಕ್ರಮ ಮತ್ತು ಪೂಜೆ ನೆರವೇರಿಸಲಾಯಿತು.
ನಂತರ ಮಾತನಾಡಿದ ಎನ್.ಯು.ನಾಚಪ್ಪ ಕೊಡವರ ಪುರಾತನ ಸಂಸ್ಕøತಿಯಂತೆ ಕಾವೇರಿ ಸಂಕ್ರಮಣಕ್ಕೆ ನಾಲ್ಕು ಮತ್ತು ಐದು ದಿನಗಳ ಮೊದಲು ಕೊಡಗಿನ ಭತ್ತದ ಗದ್ದೆಗಳಿಗೆ, ಬೋಟಿ ಕಳ, ಸೆಗಣಿ ಗುಂಡಿ, ಬಾವಿ, ಗೇಟ್ ಮತ್ತು ಮನೆಯ ಮುಂಭಾಗಕ್ಕೆ ಬೊತ್ತ್ ನೆಡುವ ಜನಪದೀಯ ಪದ್ಧತಿ ರೂಢಿಗತವಾಗಿದ್ದು, ಇದು ಅನಾದಿಕಾಲದಿಂದಲೂ ನಡೆದು ಬರುತ್ತಿದೆ. ತಲಕಾವೇರಿಯಲ್ಲಿ ತೀರ್ಥೋದ್ಭವದ ಮಾರನೆಯ ದಿನ ನಸುಕಿನಲ್ಲಿ ಗದ್ದೆಯಲ್ಲಿ ನೆಡಲಾದ ಬೊತ್ತ್ ಬಳ್ಳಿಗೆ ದೋಸೆ, ಸಮರ್ಪಿಸುವ ಪದ್ಧತಿ ನಡೆದುಕೊಂಡು ಬರುತ್ತಿದೆ. ಅದರಂತೆ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ 1785ರಲ್ಲಿ ಕೊಡವರ ನರಮೇಧ ದುರಂತ ನಡೆದ ದೇವಟಿ ಪರಂಬುವಿನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದರು.
ಈ ಸಂದರ್ಭದಲ್ಲಿ ಕಲಿಯಂಡ ಪ್ರಕಾಶ್, ಮಂದಪಂಡ ಮನೋಜ್, ಅರೆಯಡ ಗಿರೀಶ್, ಕಾಟುಮಣಿಯಂಡ ಉಮೇಶ್, ಪಟ್ಟಮಾಡ ಕುಶ, ಅಳಮಂಡ ಜೈ ಇದ್ದರು.