ಗೋಣಿಕೊಪ್ಪ ವರದಿ, ಅ. 18: ಕೌನ್ಸಿಲ್ ನ್ಯಾಷನಲ್ ಸ್ಪೋಟ್ರ್ಸ್ ಮತ್ತು ಗೇಮ್ಸ್ ಸಂಸ್ಥೆ ವತಿಯಿಂದ ಪುಣೆಯ ಬಳವಾಡಿ ಸ್ಪೋರ್ಟ್ ಮೈದಾನದಲ್ಲಿ ಆಯೋಜಿಸಿದ್ದ ಸಿಐಎಸ್‍ಸಿಇ ರಾಷ್ಟ್ರ ಮಟ್ಟದ ಅಥ್ಲೆಟಿಕ್ ಚಾಂಪಿಯನ್ ಶಿಪ್‍ನಲ್ಲಿ ಗೋಣಿಕೊಪ್ಪದ ಕಾಲ್ಸ್ ಶಾಲೆ 11 ಪದಕ ಗೆದ್ದು ಸಾಧನೆ ಮಾಡಿದೆ.
ರಾಷ್ಟ್ರದ ಐಸಿಎಸ್‍ಇ ಶಾಲೆಯ ಕ್ರೀಡಾಪಟುಗಳು ಪಾಲ್ಗೊಂಡಿದ್ದ ಈ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ ವಿಭಾಗದಲ್ಲಿ 4 ಚಿನ್ನ, 2 ಬೆಳ್ಳಿ, 5 ಕಂಚಿನ ಪದಕ ಗೆದ್ದುಕೊಂಡಿದೆ.
ಕಾಲ್ಸ್ ಶಾಲೆಯ ಕ್ರೀಡಾಪಟುಗಳು ಪ್ರತಿನಿಧಿಸಿದ್ದ 19 ವಯೋಮಿತಿಯ ಕರ್ನಾಟಕ ರಾಜ್ಯ ತಂಡ ಚಾಂಪಿಯನ್ಸ್ ಟ್ರೋಫಿ ಪಡೆದುಕೊಂಡಿತು.
ಕ್ರೀಡಾಪಟುಗಳಾದ ಕರಣ್ ಅಯ್ಯಪ್ಪ, ಆರ್.ಎಂ. ನಿಕ್ಷಿತ್, ನೀರಜ್ ಡಮೋಡರ್, ಕೆ. ವಿಕ್ರಂ, ಪಿ.ಎಸ್. ಶ್ರೀನಿಧಿ, ಎ. ಅದೀಶ್, ಎಂ. ದರ್ಶನ್, ಡಿ.ವಿ. ಅಭಿಶೇಕ್, ಕೆ.ವಿ. ಹರ್ಶಿತ್, ಸಂಜನಾ ಗಿರೀಶ್, ಭುವನ್ ಬೋಪಣ್ಣ, ಲೌಕಿಕ್ ಅಯ್ಯಪ್ಪ, ಕೆ.ಎನ್. ಪೂವಣ್ಣ, ಸಿಮ್ಷಾ ಗಣಪತಿ, ಸಿಮ್ಲಾ ಗಣಪತಿ, ಆದಿತ್ಯಾ ತಿರ್ಲಾಪುರ್, ಕೆ.ಡಿ. ಕುಶಾಲಪ್ಪ ಪಾಲ್ಗೊಂಡಿದ್ದರು. ತರಬೇತು ದಾರರಾಗಿ ರಘು, ವ್ಯವಸ್ಥಾಪಕರಾಗಿ ಸ್ವರೂಪ್ ಪಾಲ್ಗೊಂಡಿದ್ದರು.
-ಸುದ್ದಿಮನೆ