ಸಿದ್ದಾಪುರ, ಅ. 18: ಇಲ್ಲಿನ ಗುಹ್ಯ ಗ್ರಾಮದ ಶ್ರೀ ಅಗಸ್ತ್ಯೇಶ್ವರ ಮಹಾದೇವರ ದೇವಸ್ಥಾನದಲ್ಲಿ ದೀಪಾವಳಿ ಉತ್ಸವ ಪ್ರಯುಕ್ತ ವಾರ್ಷಿಕ ಶ್ರೀ ಅಗಸ್ತ್ಯೇಶ್ವರ ಮಹಾ ದೇವರ ಉತ್ಸವ ಕಾರ್ಯನಿಮಿತ್ತ ತಾ. 24ರ ಬೆಳಿಗ್ಗೆ 9 ಗಂಟೆಗೆ ಪ್ರಾರ್ಥನೆ, 9.30ಕ್ಕೆ ಗಣಹೋಮ, 10.30ಕ್ಕೆ ಸತ್ಯನಾರಾಯಣ ಪೂಜೆ ಹಮ್ಮಿಕೊಳ್ಳಲಾಗಿದ್ದು, ಮಧ್ಯಾಹ್ನ 1 ಗಂಟೆಗೆ ಭೋಜನ ಕಾರ್ಯಕ್ರಮ ಇಟ್ಟುಕೊಳ್ಳಲಾಗಿದೆ. ಸಂಜೆ 6.30 ಗಂಟೆಗೆ ಉತ್ಸವ ಪ್ರಾರ್ಥನೆ, 7 ಗಂಟೆಗೆ ಭಂಡಾರ ತರುವದು ನಂತರ ಉತ್ಸವ ಪ್ರಾರಂಭಗೊಳ್ಳಲಿದೆ.
ತಾ. 25ರಂದು ಬೆಳಿಗ್ಗೆ 5.30ಕ್ಕೆ ಬಲಿ ಪ್ರಾರಂಭ, ಮಧ್ಯಾಹ್ನ ಪೂಜೆ, ಪ್ರಸಾದ ವಿತರಣೆ ಹಾಗೂ ಸಂಜೆ 7 ಗಂಟೆಗೆ ಬಲಿಯ ನಂತರ ಪೂಜೆ, ಪ್ರಸಾದ ವಿತರಣೆ ಮಾಡಲಾಗುವದು. ತಾ. 26ರಂದು ಬೆಳಿಗ್ಗೆ 5.30ಕ್ಕೆ ಬಲಿ, ನಂತರ ಪೂಜೆ, ಮಧ್ಯಾಹ್ನ ಪೂಜೆ, ಪ್ರಸಾದ, ಸಂಜೆ 7 ಗಂಟೆಗೆ ಬಲಿ ನಂತರ ಪೂಜೆ, ಪ್ರಸಾದ ವಿನಿಯೋಗ.
ತಾ. 27 ರಂದು ಬೆಳಿಗ್ಗೆ ಹೋಮ, 5.18ಕ್ಕೆ ತೈಲಾಭ್ಯಂಜನ, 6.30ಕ್ಕೆ ಬಲಿ ನಂತರ ಪೂಜೆ, ಪ್ರಸಾದ, ಮಧ್ಯಾಹ್ನ ಅನ್ನ ಸಂತರ್ಪಣೆ, ಪೂಜೆ ಪ್ರಸಾದ, ಸಂಜೆ 7 ಗಂಟೆಗೆ ದೀಪ ನೆರಪು ಬಲಿ ಉತ್ಸವ ಕಳೆದು ಶ್ರೀ ರಂಗಪೂಜೆ ಕಾರ್ಯಕ್ರಮ ಇರುತ್ತದೆ. ರಾತ್ರಿ ಪೂಜೆ ಪ್ರಸಾದ ಬಳಿಕ ಭೋಜನ ವ್ಯವಸ್ಥೆ ಇರುತ್ತದೆ. ಸಂಜೆ ವಸಂತ ಪೂಜೆ ಹಮ್ಮಿಕೊಳ್ಳಲಾಗಿದೆ.
ತಾ. 28ರ ಬೆಳಿಗ್ಗೆ 4.30 ರಿಂದ ಪಿಂಡಾದಿ ಕರ್ಮಗಳು ನಡೆಯುತ್ತದೆ. ಮಧ್ಯಾಹ್ನ ಪೂಜೆ, ಪ್ರಸಾದ ನಂತರ ಸಂಜೆ 4.30ಕ್ಕೆ ಉತ್ಸವ ಬಲಿ, ನೃತ್ಯ, ದೇವರ ಜಳಕ, ಶ್ರೀ ಚಾಮುಂಡೇಶ್ವರಿಗೆ ತಂಬಿಲ, ಶ್ರೀ ಅನ್ನಪೂರ್ಣೇಶ್ವರಿಗೆ ದುರ್ಗಾಪೂಜೆ ಕೂಡ ಹಮ್ಮಿಕೊಳ್ಳಲಾಗಿದೆ.
ತಾ. 29ರಂದು ನವಕಲಶ ಹಾಗೂ ಭಂಡಾರ ಹಣದ ಎಣಿಕೆ, ಮಹಾಪೂಜೆ, ಪ್ರಸಾದ ನಂತರ ಊಟದ ವ್ಯವಸ್ಥೆ ಇರುತ್ತದೆ ಎಂದು ಶ್ರೀ ಅಗಸ್ತ್ಯೇಶ್ವರ ಮಹಾದೇವರ ಟ್ರಸ್ಟ್ ಹಾಗೂ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.