ಮಡಿಕೇರಿ, ಅ. 16: ಕರ್ತವ್ಯದ ವೇಳೆ ಮದ್ಯಪಾನ ಮಾಡುವದು ಸೇರಿದಂತೆ; ಸಾರ್ವಜನಿಕವಾಗಿ ದುರ್ನಡತೆ ಸಹಿತ, ಬದುಕಿರುವ ವ್ಯಕ್ತಿಗಳ ಹೆಸರಿನಲ್ಲಿ ನಕಲಿ ಮರಣ ಪತ್ರ ಸೃಷ್ಟಿಸಿರುವ ಗಂಭೀರ ಆರೋಪಗಳ ಮೇರೆಗೆ, ಶಾಂತಳ್ಳಿ ಹೋಬಳಿ ಗ್ರಾಮಲೆಕ್ಕಿಗ ಪಿ.ಎಸ್. ನಾಗೇಂದ್ರ ಎಂಬವರನ್ನು ಅಮಾನತುಗೊಳಿಸಲಾಗಿದೆ.

ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಸಂಬಂಧಿಸಿದ ಗ್ರಾಮಲೆಕ್ಕಿಗರ ವರ್ತನೆ ಬಗ್ಗೆ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಕೂಡ ಗಮನ ಸೆಳೆದಿದ್ದು; ಸಚಿವ ವಿ. ಸೋಮಣ್ಣ ಸೂಕ್ತ ಕ್ರಮಕ್ಕೆ ಸೂಚಿಸಿದ್ದನ್ನು ಇಲ್ಲಿ ಸ್ಮರಿಸಬಹುದು.ಆ ಮೇರೆಗೆ ಉಪವಿಭಾಗಾಧಿಕಾರಿ ಟಿ. ಜವರೇಗೌಡ ಅವರು, ಕೆಳ ಹಂತದ ಅಧಿಕಾರಿಗಳಿಂದ ಆರೋಪಿತ ಗ್ರಾಮಲೆಕ್ಕಿಗ ನಾಗೇಂದ್ರ ವಿರುದ್ಧ ಮಾಹಿತಿ ಸಂಗ್ರಹಿಸಿದ್ದರು. ಈ ವೇಳೆ ಶಾಂತಳ್ಳಿ ಶಾಂತಳ್ಳಿ ಹೋಬಳಿ ಗ್ರಾಮಲೆಕ್ಕಿಗ ಅಮಾನತು(ಮೊದಲ ಪುಟದಿಂದ) ಹೋಬಳಿ ಚಿಕ್ಕತೋಳೂರು ಗ್ರಾಮದ ಸಿ.ಪಿ. ಕುಶಾಲಪ್ಪ ಎಂಬವರು ಲಿಖಿತ ದೂರು ಸಲ್ಲಿಸಿದ್ದರು.

ಆ ಪ್ರಕಾರ ಗ್ರಾಮಲೆಕ್ಕಿಗ ನಾಗೇಂದ್ರ ವಿರುದ್ಧ ಸಲ್ಲಿಸಿದ ಪಿರ್ಯಾದಿಯ ದೂರಿನ ಪ್ರಕಾರ, ಕುಶಾಲಪ್ಪ ಅವರ ತಾಯಿ ಕೆ.ಪಿ. ಜಾನಕಮ್ಮ, ಸೋದರರಾದ ಕೆ.ಪಿ. ಆನಂದ, ಕೆ.ಪಿ. ಗಣಪತಿ ಜೀವಂತವಾಗಿದ್ದರೂ, ಅಧಿಕಾರ ದುರುಪಯೋಗದೊಂದಿಗೆ ಮೇಲ್ಕಾಣಿಸಿದವರು ಮರಣ ಹೊಂದಿರುವದಾಗಿ ನಕಲಿ ದಾಖಲೆ ಸೃಷ್ಟಿಸಿರುವದು ಬೆಳಕಿಗೆ ಬಂದಿದೆ.

ಅಲ್ಲದೆ, ಈ ಬಗ್ಗೆ ತಾ. 18.7.2019 ರಂದು ಸಂಬಂಧಿಸಿದ ಆರೋಪಕ್ಕೆ 24 ಗಂಟೆಯೊಳಗೆ ಉತ್ತರಿಸಲು ಆದೇಶಿಸಿದ್ದರೂ ಈ ತನಕ ಯಾವದೇ ಸಮಜಾಯಿಷಿಕೆ ನೀಡದಿರುವ ಕಾರಣ, ಇದೀಗ ಕಾನೂನು ಕ್ರಮ ಜರುಗಿಸಲಾಗಿದೆ.

ಆರೋಪಿಯನ್ನು ಅಮಾನತುಗೊಳಿಸುವದರೊಂದಿಗೆ; ಮೇಲಧಿಕಾರಿಗಳ ಅನುಮತಿಯಿಲ್ಲದೆ ಕೇಂದ್ರ ಸ್ಥಾನ ಬಿಟ್ಟು ತೆರಳದಂತೆಯೂ ಆದೇಶಿಸಲಾಗಿದೆ ಎಂದು ಉಪ ವಿಭಾಗಾಧಿಕಾರಿಗಳು ಖಚಿತಪಡಿಸಿದ್ದಾರೆ.