ಶ್ರೀಮಂಗಲ, ಅ. 16: ತಾವಳಗೇರಿ ಮೂಂದ್‍ನಾಡ್ ಕೊಡವ ಸಮಾಜದ ಆಶ್ರಯದಲ್ಲಿ, ಸಾರ್ವಜನಿಕ ಗೌರಿ ಗಣೇಶ ಸೇವಾ ಸಮಿತಿ ಟಿ. ಶೆಟ್ಟಿಗೇರಿ, ಸಂಭ್ರಮ ಪೊಮ್ಮಕ್ಕಡ ಕ್ರೀಡೆ-ಸಾಂಸ್ಕøತಿಕ ಸಂಸ್ಥೆ ಹಾಗೂ ಕೊಡವ ತಕ್ಕ್ ಎಳ್ತ್‍ಕಾರಡ ಕೂಟದ ಸಹಕಾರದಲ್ಲಿ ತಾ. 18 ರಿಂದ 27ರ ವರೆಗೆ ಟಿ.ಶೆಟ್ಟಿಗೇರಿಯಲ್ಲಿರುವ ತಾವಳಗೇರಿ ಮೂಂದ್‍ನಾಡ್ ಕೊಡವ ಸಮಾಜದಲ್ಲಿ ಮೂರನೇ ವರ್ಷದ ಚಂಗ್ರಾಂದಿ ಪತ್ತಲೋದಿ ಕಾರ್ಯಕ್ರಮ ನಡೆಯಲಿದೆ.
ಕೊಡವ ಜನಾಂಗದ ಹಬ್ಬಗಳಲ್ಲಿ ಬಹಳ ಮುಖ್ಯವಾದದ್ದು ಹಾಗೂ ತುಲಾ ಮಾಸದಲ್ಲಿ ದೇವಿ ಕಾವೇರಿಯನ್ನು ಭಕ್ತಿಯಿಂದ ಪೂಜಿಸುವ ಕಾವೇರಿ ಚಂಗ್ರಾಂದಿಯನ್ನು ಪತ್ತಲೋದಿಯ 10 ದಿನಗಳವರೆಗೆ ಜನೋತ್ಸವದ ರೀತಿಯಲ್ಲಿ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳೊಂದಿಗೆ ಚಂಗ್ರಾಂದಿ ಪತ್ತಲೋದಿ ಆಚರಣೆಯಾಗಿ ವಿವಿಧ ಕಾರ್ಯಕ್ರಮಗಳನ್ನು ಕಳೆದ 2 ವರ್ಷಗಳಿಂದ ಆರಂಭಿಸಿದ್ದು ಈ ವರ್ಷ 3ನೇ ವರ್ಷದ ಆಚರಣೆಯನ್ನು ವಿಜೃಂಭಣೆಯಿಂದ ನೆರವೇರಿಸುವಂತೆ ತಾವಳಗೇರಿ ಮೂಂದ್‍ನಾಡ್ ಕೊಡವ ಸಮಾಜದ ಅಧ್ಯಕ್ಷ ಕೋಟ್ರಮಾಡ ಅರುಣ್ ಅಪ್ಪಣ್ಣ ಅಧ್ಯಕ್ಷತೆಯಲ್ಲಿ ನಡೆದ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದ್ದು ಇದಕ್ಕೆ ಎಲ್ಲಾ ರೀತಿಯ ಪೂರ್ವಭಾವಿ ತಯಾರಿ ನಡೆಸಲಾಗಿದೆ.
ಸಾರ್ವಜನಿಕ ಗೌರಿ ಗಣೇಶ ಸೇವಾ ಸಮಿತಿಯ ಸದಸ್ಯರು ತಲಕಾವೇರಿಯಿಂದ ತೀರ್ಥೋದ್ಭವದ ಸಂದರ್ಭ ಹಾಜರಿದ್ದು ಸಂಗ್ರಹಿಸಿ ತರುವ ಪವಿತ್ರ ಕಾವೇರಿ ತೀರ್ಥವನ್ನು ತಾ. 18 ರಂದು ಬೆಳಿಗ್ಗೆ 10 ಗಂಟೆಗೆ ಟಿ.ಶೆಟ್ಟಿಗೇರಿ ಕೊಡವ ಸಮಾಜದಲ್ಲಿ ತೀರ್ಥ ಪೂಜೆ ಮಾಡಿ ಭಕ್ತಾಧಿಗಳಿಗೆಲ್ಲಾ ತೀರ್ಥ ವಿತರಿಸುವದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವದು. ಅಂದು ಸಂಜೆ 4 ಗಂಟೆಗೆ ಸಭೆ ಬಳಿಕ ವೀರಾಜಪೇಟೆ ಕಾವೇರಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಂದ ‘ಕಾವೇರಿ ದರ್ಶನ’ ಎಂಬ ವಿನೂತನ ರೀತಿಯ ನೃತ್ಯ ರೂಪಕ ಹಾಗೂ ವಿವಿಧ ಆಕಷರ್Àಕ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ.
ತಾ. 19 ರಂದು ಸಂಜೆ 4 ಗಂಟೆಯಿಂದ ಗೋಣಿಕೊಪ್ಪಲು ಕಾವೇರಿ ಕಾಲೇಜು ವಿದ್ಯಾರ್ಥಿಗಳಿಂದ ವ್ಯವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ತಾವಳಗೇರಿ ಮೂಂದ್‍ನಾಡ್ ಕೊಡವ ಸಮಾಜದ ಕಲಾವಿದÀರಿಂದ ಕೊಡವ ಜಾನಪದ ನೃತ್ಯ ಪ್ರದರ್ಶನ ನಡೆಯಲಿದೆ. ತಾ. 20 ರಂದು ಅಪರಾಹ್ನ 3 ಗಂಟೆಯಿಂದ ಗೋಣಿಕೊಪ್ಪ ಪ್ರಾರ್ಥನಾ ಕನ್‍ಫೆಕ್ಷನರಿಯ ಪ್ರಾಯೋಜಕತ್ವದಲ್ಲಿ ಕೊಡವ ಜನಾಂಗವು ಕಾವೇರಿ ಚಂಗ್ರಾಂದಿಯ ದಿವಸ ದೇವಿ ಕಾವೇರಿಗೆ ನೈವೇದ್ಯ ಅರ್ಪಿಸುವ ಸಲುವಾಗಿ ವಿಶೇಷವಾಗಿ ಮಾಡುವ ಖಾದ್ಯ ‘ದೋಸೆ ಪುಟ್ಟ್, ಕುಂಬಳ ಕರಿ’ ಮಾಡುವ ಸ್ಪರ್ಧೆ ಮಹಿಳೆಯರಿಗೆ ನಡೆಯಲಿದೆ. ನಂತರ ಗೋಣಿಕೊಪ್ಪ ಜನನಿ ಪೊಮ್ಮಕ್ಕಡ ಕೂಟದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ. ತಾ. 21 ರಂದು ಸಂಜೆ 4 ಗಂಟೆಯಿಂದ ಬೆಕ್ಕೆಸೊಡ್ಲೂರು ಮಂದತವ್ವ ಟ್ರಸ್ಟ್ ಕಲಾವಿದÀರಿಂದ ಕಾರ್ಯಕ್ರಮ ವೈವಿಧ್ಯ ಪ್ರದರ್ಶನಗೊಳ್ಳಲಿದೆ. ತಾ. 22 ರಂದು ಸಂಜೆ 4 ಗಂಟೆಯಿಂದ ಪೊನ್ನಂಪೇಟೆ ಕೊಡವ ಸಮಾಜ ಸದಸ್ಯರಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದ್ದು, ತಾ. 23 ರಂದು ಸಂಜೆ 4 ಗಂಟೆಯಿಂದ ಪೊನ್ನಂಪೇಟೆ ಸಾಯಿ ಶಂಕರ ವಿದ್ಯಾಸಂಸ್ಥೆ ವತಿಯಿಂದ ಸಾಂಸ್ಕøತಿಕ ವೈಭವ ಪ್ರದರ್ಶನಗೊಳ್ಳಲಿದೆ. ತಾ. 24ರ ಸಂಜೆ 4 ಗಂಟೆಯಿಂದ ಶ್ರೀಮಂಗಲ ಜೆ.ಸಿ. ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ರಸ ಸಂಜೆ ಕಾರ್ಯಕ್ರಮ ನಡೆಯಲಿದೆ.
ತಾ. 25 ರಂದು ಅಪರಾಹ್ನ 2 ಗಂಟೆಯಿಂದ ತಾವಳಗೇರಿ ಮೂಂದ್ ನಾಡ್‍ಗೆ ಒಳಪಡುವ ಟಿ. ಶೆಟ್ಟಿಗೇರಿ, ವಗರೆ, ತಾವಳಗೇರಿ, ಹರಿಹರ, ಈಸ್ಟ್ ನೆಮ್ಮಲೆ ಹಾಗೂ ವೆಸ್ಟ್ ನೆಮ್ಮಲೆ ಈ 6 ಗ್ರಾಮಗಳ ನಡುವೆ ಅಂತರ ಗ್ರಾಮಗಳ ವಾಲಿಬಾಲ್ ಕ್ರೀಡಾಕೂಟ ನಡೆಯಲಿದೆ. ಸಂಜೆ 4 ಗಂಟೆಯಿಂದ ಟಿ. ಶೆಟ್ಟಿಗೇರಿ ಸಂಭ್ರಮ ಪೊಮ್ಮಕ್ಕಡ ಕ್ರೀಡೆ - ಸಾಂಸ್ಕøತಿಕ ಸಂಸ್ಥೆಯ ವತಿಯಿಂದ ಕಾರ್ಯಕ್ರಮ ವೈವಿಧ್ಯ ಪ್ರದರ್ಶನಗೊಳ್ಳಲಿದೆ.
ತಾ. 26 ರಂದು ಅಪರಾಹ್ನ 2 ಗಂಟೆಯಿಂದ ತಾವಳಗೇರಿ ಮೂಂದ್ ನಾಡ್‍ಗೆ ಒಳಪಡುವ ಟಿ. ಶೆಟ್ಟಿಗೇರಿ, ವಗರೆ, ತಾವಳಗೇರಿ, ಹರಿಹರ, ಈಸ್ಟ್ ನೆಮ್ಮಲೆ ಹಾಗೂ ವೆಸ್ಟ್ ನೆಮ್ಮಲೆ ಈ 6 ಗ್ರಾಮಗಳ ನಡುವೆ ಅಂತರ ಗ್ರಾಮಗಳ ಕಬಡ್ಡಿ ಕ್ರೀಡಾಕೂಟ ನಡೆಯಲಿದೆ. ಸಂಜೆ 4 ಗಂಟೆಯಿಂದ ಟಿ. ಶೆಟ್ಟಿಗೇರಿ ರೂಟ್ಸ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಂದ ವಿಶೇಷ ರೀತಿಯ ರೂಪಕ ಪ್ರದರ್ಶನಗೊಳ್ಳಲಿದೆ.
ಚಂಗ್ರಾಂದಿ ಪತ್ತಲೋದಿ ಕಾರ್ಯಕ್ರಮದ ಅಂತಿಮ ದಿನವಾದ ತಾ. 27 ರಂದು ಬೆಳಿಗ್ಗೆ 9.30 ಗಂಟೆಯಿಂದ ವಾಲಿಬಾಲ್ ಹಾಗೂ ಕಬಡ್ಡಿ ಕ್ರೀಡಾಕೂಟದ ಅಂತಿಮ ಪಂದ್ಯಾವಳಿ ತಾವಳಗೇರಿ ಮೂಂದ್‍ನಾಡ್‍ಗೆ ಒಳಪಡುವ ಟಿ. ಶೆಟ್ಟಿಗೇರಿ, ವಗರೆ, ತಾವಳಗೇರಿ, ಹರಿಹರ, ಈಸ್ಟ್ ನೆಮ್ಮಲೆ ಹಾಗೂ ವೆಸ್ಟ್ ನೆಮ್ಮಲೆ ಈ 6 ಗ್ರಾಮಗಳ ನಡುವೆ ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕ ವಿಭಾಗದಲ್ಲಿ ಹಗ್ಗಜಗ್ಗಾಟ ಸ್ಪರ್ಧೆ ಮಹಿಳೆಯರಿಗೆ ವಿಷದಚೆಂಡು ಸ್ಪರ್ಧೆ ನಡೆಯಲಿದೆ. ನಂತರ ಸಮಾರೋಪ ಸಮಾರಂಭ ಹಾಗೂ ಕ್ರೀಡಾ ಕೂಟದ ವಿಜೇತರಿಗೆ ಬಹುಮಾನ ವಿತರಣೆ, ಸಂಜೆ 5 ಗಂಟೆಯಿಂದ ಕೊಡವ ತಕ್ಕ್ ಎಳ್ತ್‍ಕಾರಡ ಕೂಟದಿಂದ ಕೊಡವ ಆರ್ಕೆಸ್ಟ್ರಾ ಹಾಗೂ ನೃತ್ಯ ಪ್ರದರ್ಶನ ನಡೆಯಲಿದೆ. ಅಂದು ಮಧ್ಯಾಹ್ನ ಹಾಗೂ ರಾತ್ರಿ ಟಿ. ಶೆಟ್ಟಿಗೇರಿ ಗೌರಿ ಗಣೇಶ ಸೇವಾ ಸಮಿತಿಯ ಪ್ರಾಯೋಜಕತ್ವದಲ್ಲಿ ಊಟದ ವ್ಯವಸ್ಥೆ ಇರುತ್ತದೆ.
ಸಭೆಯಲ್ಲಿ ಕೊಡವ ಸಮಾಜದ ಅಧ್ಯಕ್ಷ ಕೋಟ್ರಮಾಡ ಅರುಣ್ ಅಪ್ಪಣ್ಣ, ಉಪಾಧ್ಯಕ್ಷ ಚೊಟ್ಟೆಯಾಂಡಮಾಡ ವಿಶ್ವನಾಥ್, ಕಾರ್ಯದರ್ಶಿ ಮನ್ನೇರ ರಮೇಶ್, ಖಜಾಂಜಿ ಚೊಟ್ಟೆಯಾಂಡಮಾಡ ವಿಶು, ಕ್ರೀಡೆ ಸಾಂಸ್ಕøತಿಕ ಸಮಿತಿಯ ಅಧ್ಯಕ್ಷ ಕಟ್ಟೇರ ಈಶ್ವರ, ಸಂಚಾಲಕ ಚೆಟ್ಟಂಗಡ ರವಿ ಸುಬ್ಬಯ್ಯ, ಸಲಹೆಗಾರ ಮಚ್ಚಮಾಡ ಸೋಮಯ್ಯ, ನಿರ್ದೇಶಕರಾದ ಚಂಗುಲಂಡ ಅಶ್ವಿನಿ ಸತೀಶ್ ಹಾಗೂ ನಾಡ್ ತಕ್ಕ ಕೈಬುಲೀರ ಹರೀಶ್ ಅಪ್ಪಯ್ಯ ಹಾಜರಿದ್ದರು.