ಸೋಮವಾರಪೇಟೆ, ಅ. 16: ಇಲ್ಲಿನ ಆಂಜನೇಯ ದೇವಾಲಯ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾಗಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರನ್ನು ಆಯ್ಕೆ ಮಾಡಲಾಯಿತು.
ದೇವಾಲಯದ ಆವರಣದಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಕಾರ್ಯಾಧ್ಯಕ್ಷರಾಗಿ ಎಸ್.ಎಲ್. ಸೀತಾರಾಮ್, ಕಾರ್ಯದರ್ಶಿಯಾಗಿ ಡಾ. ಶೆಟ್ಟಿ, ಖಜಾಂಜಿಯಾಗಿ ಜಯರಾಮ್, ಸದಸ್ಯರುಗಳಾಗಿ ನಂದಕುಮಾರ್, ಚಂಗಪ್ಪ, ಯಶವಂತ್, ಎಸ್. ಮಹೇಶ್, ಕಿಬ್ಬೆಟ್ಟ ಮಧು, ಸೋಮೇಶ್, ಸತೀಶ್, ಶ್ರೀಧರ್, ಅಭಿಮನ್ಯುಕುಮಾರ್, ನಾಗರಾಜು, ಮನುಕುಮಾರ್ ಸೇರಿದಂತೆ ಒಟ್ಟು 15 ಮಂದಿಯ ಸಮಿತಿ ರಚಿಸಲಾಯಿತು.
ಈ ಸಂದÀರ್ಭ ಶಾಸಕ ರಂಜನ್ ಮಾತನಾಡಿ, ದಾನಿಗಳ ಸಹಕಾರ ಪಡೆದು ತ್ವರಿತ ಗತಿಯಲ್ಲಿ ದೇವಾಲಯದ ಜೀರ್ಣೋದ್ಧಾರ ನಡೆಯುವಂತಾಗಬೇಕು. ತಕ್ಷಣವೇ ಅಷ್ಟಮಂಗಲ ಪ್ರಶ್ನೆಯ ಮೂಲಕ ದೇವಾಲಯ ನಿರ್ಮಾಣಕ್ಕೆ ಸಲಹೆ ಪಡೆದು ಮುಂದಿನ ಕಾರ್ಯ ಪ್ರಾರಂಭಿಸಬೇಕು. ಇಂತಹ ಮಹತ್ತರ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದ ಅವರು, ಎರಡು ವರ್ಷಗಳೊಳಗೆ ದೇವಾಲಯ ನಿರ್ಮಾಣ ಸಂಪೂರ್ಣವಾಗಬೇಕೆಂದು ಆಶಯ ವ್ಯಕ್ತಪಡಿಸಿದರು.
ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಸಿ.ಪಿ. ಗೋಪಾಲ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸೀತಾರಾಂ ಹಾಗೂ ಮತ್ತಿತರ ಪ್ರಮಖರು ಉಪಸ್ಥಿತರಿದ್ದರು.