ಮಡಿಕೇರಿ, ಅ. 16: ನ್ಯಾಷನಲ್ ರೆಸ್ಕ್ಯೂ ಸೇವಿಂಗ್ ಇಂಡಿಯಾದ ಸಂಸ್ಥೆಯಿಂದ ಗುಜರಾತಿನ ಡಿಯು ಅಂಡ್ ದಮನ್‍ನಲ್ಲಿ ತಾ. 19 ರಂದು ನಡೆಯಲಿರುವ ರೆಸ್ಕ್ಯೂ ಆಪರೇಷನ್ ಸ್ಪರ್ಧೆಯಲ್ಲಿ ಭಾಗವಹಿಸಲು ಮರಗೋಡಿನ ರಿತೀಶ್ ಬೆಳ್ಳೂರ್ ತೆರಳಲಿದ್ದಾರೆ.

ಗುಜರಾತಿನ ಡಿಯು ಅಂಡ್ ದಮನ್‍ನಲ್ಲಿ ತಾ. 19 ರಿಂದ 25 ರವರೆಗೆ ನಡೆಯಲಿರುವ ರೆಸ್ಕ್ಯೂ ಆಪರೇಷನ್ ಸ್ಪರ್ಧೆಯಲ್ಲಿ ಭಾಗವಹಿಸಲು ತಾ. 17 ರಂದು ಮಂಗಳೂರಿನಿಂದ ರಿತೀಶ್ ಸೇರಿದಂತೆ ಒಟ್ಟು 24 ಮಂದಿ ವಿವಿಧ ಕ್ರೀಡಾಪಟುಗಳು ಮಂಗಳೂರಿನ ಮಂಗಳಾ ಕ್ಲಬ್ ಮೂಲಕ ಡಿಯು ಅಂಡ್ ದಮನ್‍ಗೆ ತೆರಳಲಿದ್ದಾರೆ. ಕೊಡಗಿನಲ್ಲಿ ಕಳೆದ ವರ್ಷ ಹಾಗೂ ಈ ವರ್ಷ ಸಂಭವಿಸಿದ ಪ್ರವಾಹದಲ್ಲಿ ಸಿಲುಕಿದ ಜನತೆಯನ್ನು ರಕ್ಷಿಸುವ ಪ್ರಾತ್ಯಕ್ಷತೆಯ ಸ್ಪರ್ಧೆಯಲ್ಲಿ ಭಾಗವಹಿಸುವರು.

ರಿತೀಶ್‍ಬೆಳ್ಳೂರ್ ಮಡಿಕೇರಿಯಲ್ಲಿ ವ್ಯಾಸಂಗ ಮಾಡುತ್ತಿರುವಾಗಲೇ ಜನರಲ್ ತಿಮ್ಮಯ್ಯ ಕ್ರೀಡಾಂಗಣದ ಈಜು ಕೊಳದಲ್ಲಿ ಈಜು ಅಭ್ಯಾಸ ಮಾಡುತ್ತಿದ್ದರು.

ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ನಡೆದ ವಿಶ್ವವಿದ್ಯಾಲಯ ಈಜು ಸ್ಪರ್ಧೆಯಲ್ಲಿ ವಿವಿಧ ಕಡೆಗಳಲ್ಲಿ ನಡೆದ ಈಜು ಸ್ಪರ್ಧೆಗಳಲ್ಲಿ ಪಾಲ್ಗೊಂಡು ಚಿನ್ನ ಸೇರಿದಂತೆ ಇತರ ಪದಕಗಳು ಮತ್ತು ಪ್ರಶಸ್ತಿಗಳನ್ನು ರಿತೀಶ್ ಪಡೆದುಕೊಂಡಿದ್ದಾರೆ.

ರಿತೀಶ್ ಮರಗೋಡಿನ ಪ್ರಕಾಶ್‍ಬೆಳ್ಳೂರ್ ಮತ್ತು ರೇಣುಕಾ ಬೆಳ್ಳೂರ್ ದಂಪತಿಯ ಪುತ್ರ.