ಸೋಮವಾರಪೇಟೆ, ಅ. 16: ಕಳೆದ ಎರಡು ವರ್ಷಗಳಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಸೇವೆ ಸಲ್ಲಿಸುತಿದ್ದ ನಾಗರಾಜಯ್ಯ ಅವರು ಮೈಸೂರಿಗೆ ವರ್ಗಾವಣೆಯಾದ ಹಿನ್ನೆಲೆ ಕಚೇರಿಯ ಸಿಬ್ಬಂದಿಗಳು, ಶಿಕ್ಷಕರು ಆತ್ಮೀಯವಾಗಿ ಬೀಳ್ಕೊಟ್ಟರು.

ಬಿ.ಇ.ಒ. ಕಚೇರಿ ಆವರಣದಲ್ಲಿ ನಡೆದ ಸರಳ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ನಾಗರಾಜಯ್ಯ, ಇಲ್ಲಿನ ಜನತೆ ಸ್ನೇಹಪರತೆ ಉಳ್ಳವರು. ಇಲಾಖೆಯ ಎಲ್ಲ ನೌಕರರು ಉತ್ತಮ ಸಹಕಾರ ನೀಡಿದ್ದರಿಂದ ಇಲ್ಲಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಯಿತು ಎಂದರು. ಈ ಸಂದÀರ್ಭ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ಬಸವರಾಜ್, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಕುಮಾರ್, ಪ್ರಭಾರ ಬಿ.ಇ.ಒ ಮಂಜೇಶ್ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಚನ್ನಪ್ಪ ಉಪಸ್ಥಿತರಿದ್ದರು.