ನಾಪೆÉÇೀಕ್ಲು, ಅ. 16: ನಾಪೆÇೀಕ್ಲುವಿನ ಕೊಡಗು ಹಕ್ಕು ಸಂರಕ್ಷಣಾ ಸಮಿತಿಯ 23 ನೇ ವರ್ಷದ ಕಾವೇರಿ ರಥ ಯಾತ್ರೆಯು ತಾ. 17 ರಂದು (ಇಂದು) ಅಪರಾಹ್ನ 2 ಗಂಟೆಗೆ ಪಟ್ಟಣದ ಶ್ರೀ ಗಣಪತಿ ದೇವಳದಿಂದ ಆರಂಭಗೊಳ್ಳಲಿದೆ.
ತಲಕಾವೇರಿ ಪುಣ್ಯ ತೀರ್ಥೋದ್ಭವಕ್ಕೆ ಆಗಮಿಸುವ ಈ ರಥವು ನಾಪೆÉÇೀಕ್ಲುವಿನಿಂದ ಬೆಟ್ಟಗೇರಿ, ಕಾರುಗುಂದ, ಕೊಟ್ಟೂರು, ಚೇರಂಬಾಣೆ, ತೊಟ್ಲುಕುಂಞ, ಕೋಪಟ್ಟಿ, ಚೆಟ್ಟಿಮಾನಿ, ಮೂಲಕ ಭಾಗಮಂಡಲಕ್ಕೆ ಸಂಜೆ 6 ಗಂಟೆಗೆ ತಲಪಲಿದೆ. ರಾತ್ರಿ ನಡೆಯುವ ತೀರ್ಥೊದ್ಭವದ ನಂತರ ಶುಕ್ರವಾರ ಬೆಳಿಗ್ಗೆ ಕಾವೇರಿ ಮಾತೆಯ ಪವಿತ್ರ ತೀರ್ಥದೊಂದಿಗೆ ರಥಯಾತ್ರೆಯು ಭಾಗಮಂಡಲದಿಂದ 6 ಗಂಟೆಗೆ ಆರಂಭಗೊಂಡು 6.30ಕ್ಕೆ ಚೇರಂಗಾಲ, 7 ಗಂಟೆಗೆ ಅಯ್ಯಂಗೇರಿ, 7.30ಕ್ಕೆ ಬಲ್ಲ, 8 ಗಂಟೆಗೆ ಸಣ್ಣಪುಲಿಕೋಟು, 8.15ಕ್ಕೆ ದೊಡ್ಡ ಪÀÅಲಿಕೋಟು, 8.30ಕ್ಕೆ ಪೇರೂರು, 9ಕ್ಕೆ ಬಲ್ಲಮಾವಟಿ, 9.30ಕ್ಕೆ ನೆಲಜಿ, 10 ಗಂಟೆಗೆ ಚೋನಾಕೆರೆ, 10.30ಕ್ಕೆ ಹಳೇತಾಲೂಕು, 11 ಗಂಟೆಗೆ ನಾಪೆÉÇೀಕ್ಲುವಿಗೆ ತಲಪಲಿದೆ, ಭಕ್ತಾಧಿಗಳು ಕಾವೇರಿ ಮಾತೆಯ ತೀರ್ಥವನ್ನು ಪಡೆದುಕೊಳ್ಳಲು ಈ ಮೇಲಿನ ನಿಗದಿತ ಸ್ಥಳಗಳಲ್ಲಿ ಹಾಜರಿರಬೇಕು ಎಂದು ಕೊಡಗು ಹಕ್ಕು ಸಂರಕ್ಷಣಾ ಸಮಿತಿಯ ಅಧ್ಯಕ್ಷ ಬಿದ್ದಾಟಂಡ ರೋಜಿ ಚಿಣ್ಣಪ್ಪ ಕೋರಿದ್ದಾರೆ.