ಗೋಣಿಕೊಪ್ಪ ವರದಿ, ಅ. 16: ತಾ. 22 ರಂದು ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹೃದಯ ರೋಗ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ಗೋಣಿಕೊಪ್ಪ ರೋಟರಿ ಕ್ಲಬ್ ಅಧ್ಯಕ್ಷ ಕಾಡ್ಯಮಾಡ ನೆವಿನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಗೋಣಿಕೊಪ್ಪ ರೋಟರಿ ಕ್ಲಬ್ ಹಾಗೂ ಮೈಸೂರು ಅಪೊಲೋ ಬಿಜೆಎಸ್ ಆಸ್ಪತ್ರೆ ಸಹಯೋಗದಲ್ಲಿ ಅಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ತಪಾಸಣೆ ನಡೆಯಲಿದೆ.
ರಕ್ತದೊತ್ತಡ, ಮಧುಮೇಹ, ಹೃದಯ ರೋಗ ತಜ್ಞರಿಂದ ಸಪಾಸಣೆ ನಡೆಯಲಿದೆ. ತಜ್ಞರ ಸಲಹೆಯಂತೆ ಅವಶ್ಯ ಇರುವವರಿಗೆ ಇಸಿಜಿ, ಇಕೋ ಪರೀಕ್ಷೆ ಉಚಿತವಾಗಿ ನಡೆಸಲಾಗು ವದು. ಧೂಮಪಾನಿಗಳು, ಮಧುಮೇಹಿಗಳು, ಅಧಿಕ ಕೊಲೆಸ್ಟ್ರಾಲ್, ರಕ್ತದೊತ್ತಡ, ಉಸಿರಾಟದ ತೊಂದರೆ, ನಿರಂತರ ಆಯಾಸ ಇರುವವರು ಶಿಬಿರದಲ್ಲಿ ಪಾಲ್ಗೊಂಡು ಸೂಕ್ತ ಸಲಹೆ ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ 9449987737, 9880929143 ಸಂಖ್ಯೆ ಸಂಪರ್ಕಿಸ ಬಹುದಾಗಿದೆ ಎಂದು ತಿಳಿಸಿದರು.
ಹಿರಿಯ ಸದಸ್ಯ ಡಾ. ಚಂದ್ರಶೇಖರ್ ಮಾತನಾಡಿ, ಆರೋಗ್ಯದ ದೃಷ್ಟಿಯಿಂದ ರೋಟರಿ ಸಂಸ್ಥೆ ಅನುಷ್ಠಾನಗೊಳಿಸಿದ ಪೋಲಿಯೋ ವಿರುದ್ಧ ಸಮರ ಯಶಸ್ವಿಯಾಗಿದ್ದು, ತಾ. 24 ರಂದು ವಿಶ್ವ ಪೋಲಿಯೋ ದಿನಾಚರಣೆ ನಡೆಯುತ್ತಿದೆ. ಪ್ರಪಂಚದಲ್ಲಿ ಶೇ. 99.9 ಪೋಲಿಯೋ ನಿರ್ಮೂಲನೆಯಾ ಗಿದ್ದು, ಪಾಕಿಸ್ತಾನ, ಅಫ್ಘಾನಿಸ್ತಾನದಲ್ಲಿ ಒಂದಷ್ಟು ರೋಗ ಉಳಿದುಕೊಂಡಿದೆ. ಇಲ್ಲಿಯೂ ನಿರ್ಮೂಲನೆ ಯಶಸ್ವಿ ಯಾದರೆ 2020 ಕ್ಕೆ ಪೋಲಿಯೋ ಫ್ರೀ ಯಶಸ್ವಿ ಸಾಧಿಸಬಹುದು ಎಂದರು.ಗೋಷ್ಠಿಯಲ್ಲಿ ಕಾರ್ಯದರ್ಶಿ ತಾಣಚ್ಚೀರ ಪೂಣಚ್ಚ, ಖಜಾಂಜಿ ಅಜ್ಜಿಕುಟ್ಟೀರ ಸಜನ್ ಚಂಗಪ್ಪ, ಸದಸ್ಯ ಕುಂಞಂಡ ಅರುಣ್ ಉಪಸ್ಥಿತರಿದ್ದರು.