ಸುಂಟಿಕೊಪ್ಪ, ಅ. 15: ಕಂಬಿಬಾಣೆ ಭಾರತೀಯ ಜನತಾ ಪಕ್ಷದ ಬೂತ್ ಸಮಿತಿ ಅಧ್ಯಕ್ಷರಾಗಿ ಎನ್.ಎಸ್. ಅಜಿತ್‍ಕುಮಾರ್, ಕಾರ್ಯದರ್ಶಿಯಾಗಿ ಬಿ.ಎನ್. ಶಿವಕುಮಾರ್ ಅವರುಗಳನ್ನು ನೇಮಕಗೊಳಿಸಲಾಯಿತು.

ಕಂಬಿಬಾಣೆಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ 1ನೇ ವಾರ್ಡಿನ ಸಭೆಯನ್ನು ಗ್ರಾ.ಪಂ. ಮಾಜಿ ಅಧ್ಯಕ್ಷ ಡಾ. ಶಶಿಕಾಂತ ರೈ ಅಧ್ಯಕ್ಷತೆಯಲ್ಲಿ ಕಂಬಿಬಾಣೆ ಸಮುದಾಯ ಭವನದಲ್ಲಿ ಆಯೋಜಿಸಲಾಗಿತ್ತು. ಬೂತ್ ಸಮಿತಿ ಸದಸ್ಯರುಗಳಾಗಿ ಮುತ್ತು, ಮಾಯ, ಮಾಲಾ, ಶಿವಪ್ಪ, ಸುಜನ್, ಆನಂದ, ರುದ್ರೇಶ್, ಮಹೇಶ್, ಹರೀಶ್, ಶಿವು, ಮೋಹನ ಹಾಗೂ ಸರಸು ಇವರುಗಳನ್ನು ನೇಮಕಗೊಳಿಸಲಾಯಿತು.

ದೇಶದ ಮತ್ತು ರಾಜ್ಯದಲ್ಲಿ ನಮ್ಮ ಸರಕಾರವು ಹತ್ತು ಹಲವು ಜನಪರ ಯೋಜನೆಗಳನ್ನು ಜಾರಿಗೆ ಸರಕಾರವು ನೀಡುತ್ತಿರುವ ಸವಲತ್ತುಗಳ ಬಗ್ಗೆ ಪ್ರತಿ ಬೂತ್ ಮಟ್ಟದ ಜನರಿಗೆ ಮನವರಿಕೆ ಮಾಡಿಕೊಡುವ ಕಾಯಕದಲ್ಲಿ ಪದಾಧಿಕಾರಿಗಳು ತೊಡಗಿಸಿಕೊಳ್ಳುವಂತೆ ಡಾ. ಶಶಿಕಾಂತ ರೈ ಕರೆ ನೀಡಿದರು.