*ಗೋಣಿಕೊಪ್ಪಲು, ಅ. 15: ತಿತಿಮತಿ ಶ್ರೀ ಇಗ್ಗುತ್ತಪ್ಪ ಕೊಡವ ಒಕ್ಕೂಟದಿಂದ ಕೈಲ್ ಮುಹೂರ್ತ ಕ್ರೀಡಾಕೂಟ ಆಚರಿಸಲಾಯಿತು.

ಸಂಘದ ಅಧ್ಯಕ್ಷ ಬೊಳ್ತಂಡ ಬಿ. ಚಂಗಪ್ಪ ನೇತೃತ್ವದಲ್ಲಿ ತಿತಿಮತಿ ಕಾವೇರಿ ಸಭಾಂಗಣದಲ್ಲಿ ನಡೆಯಿತು. ತೆಂಗಿನಕಾಯಿಗೆ ಕಲ್ಲೆಸೆದು ಒಡೆಯುವದು, ಮಡಿಕೆ ಒಡೆಯುವದು ಹಾಗೂ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಶ್ರೀ ಇಗ್ಗುತ್ತಪ್ಪ ಕೊಡವ ಒಕ್ಕೂಟವು 2009ರಲ್ಲಿ ಸ್ಥಾಪನೆಯಾಗಿ 36 ಕೊಡವ ಕುಟುಂಬದವರು ಸದಸ್ಯತ್ವವನ್ನು ಪಡೆದುಕೊಂಡಿದ್ದಾರೆ.

ಸಂಘದ ವತಿಯಿಂದ 10ನೇ ತರಗತಿ, ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಮಕ್ಕಳಿಗೆ ಪೆÇ್ರೀತ್ಸಾಹಕ ಬಹುಮಾನ, ಸಂಘದ ಸದಸ್ಯರು ಮರಣಹೊಂದಿದಲ್ಲಿ ಮರಣ ನಿಧಿ ಸೇರಿದಂತೆ ಶಸ್ತ್ರ ಚಿಕಿತ್ಸೆಗಳಿಗೆ ಸಹಾಯಧನ ನೀಡುವ ಯೋಜನೆಗಳನ್ನು ರೂಪಿಸುತ್ತಿದೆ ಎಂದು ಸಂಘದ ಅಧ್ಯಕ್ಷ ಚಂಗಪ್ಪ ಮಾಹಿತಿ ನೀಡಿದರು. ಈ ಸಂದರ್ಭ ಕಾರ್ಯದರ್ಶಿಗಳಾದ ಮನೆಯಪಂಡ ಎಂ. ಮಹೇಶ್, ಖಜಾಂಚಿ ಪಾಲೆಂಗಡ ಮನು ನಂಜಪ್ಪ ಸೇರಿದಂತೆ ಸಂಘದ ಪದಾಧಿಕಾರಿಗಳು, ಕೂಟದ ಕುಟುಂಬ ಸದಸ್ಯರು ಹಾಜರಿದ್ದರು.