ಗೋಣಿಕೊಪ್ಪ ವರದಿ, ಅ. 15: ಕಾಡಾನೆಗಳ ದಾಳಿಗೆ ಕಾಡುಕೋಣ ಮೃತಪಟ್ಟಿರುವ ಘಟನೆ ನಾಗರಹೊಳೆ ಉದ್ಯಾನವನದ ಆನೆಚೌಕೂರು ವ್ಯಾಪ್ತಿಯ ಮರಪಾಲ ಪ್ರದೇಶದಲ್ಲಿ ನಡೆದಿದೆ.
ಮಂಗಳವಾರ ಮುಂಜಾನೆ ಕಾಡುಕೋಣದ ಕಳೇಬರ ಪತ್ತೆಯಾಗಿದ್ದು, ಸುಮಾರು 15 ವರ್ಷ ವಯಸ್ಸಾಗಿರಬಹುದು ಎಂದು ಅಂದಾಜಿಸಲಾಗಿದೆ.
ನಾಗರಹೊಳೆ ಸಂರಕ್ಷಣಾದಿ üಕಾರಿ ನಾರಾಯಣಸ್ವಾಮಿ, ಎಸಿಎಫ್ ಪ್ರಸನ್ನಕುಮಾರ್ ಸಲಹೆಯಂತೆ ಸ್ಥಳಕ್ಕೆ ಆನೆಚೌಕೂರು ವನ್ಯಜೀವಿ ವಲಯ ಅಧಿಕಾರಿ ಶಿವಾನಂದ್, ಉಪ ವಲಯ ಅಧಿಕಾರಿ ಶಿವಲಿಂಗಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಶುವೈಧ್ಯ ಡಾ. ಮುಜಿಬ್ ರೆಹಮನ್ ಶವ ಪರೀಕ್ಷೆ ನಡೆಸಿ, ನಂತರ ಸ್ಥಳದಲ್ಲಿಯೇ ಹೂಳಲಾಯಿತು.
ಸ್ಥಳದಲ್ಲಿ ಕಾಡಾನೆಗಳ ಹಿಂಡಿನ ಹೆಜ್ಜೆಗುರುತು ಹೆಚ್ಚಾಗಿ ಕಂಡು ಬಂದಿದ್ದು, ಹಿಂಡಿನ ನಡುವೆ ಸಿಲುಕಿ ಘಾಸಿಗೊಂಡು ಸಾವನಪ್ಪಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪರಿಶೀಲನೆ ಸಂದÀರ್ಭ ವನ್ಯಜೀವಿ ಸಮಿತಿ ಸದಸ್ಯ ಸುಬ್ರು ಇದ್ದರು.