ಮಡಿಕೇರಿ, ಅ.14: ಮೂರ್ನಾಡುವಿನ ಹೋಂ ಸ್ಟೇಯೊಂದರಲ್ಲಿ ಭಾನುವಾರ ಹಗಲು ವೇಳೆಯೇ ವೇಶ್ಯಾವಾಟಿಕೆ ನಡೆಯುತ್ತಿ ದ್ದುದನ್ನು ಪೊಲೀಸರು ಭೇದಿಸಿದ್ದಾರೆ. ಆರು ಮಂದಿ ಆರೋಪಿ ಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಓರ್ವ ಆರೋಪಿ ತಲೆ ಮರೆಸಿ ಕೊಂಡಿದ್ದು ಪೊಲೀಸರಿಂದ ಶೋಧನೆ ನಡೆದಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯವರಿಗೆ ದೊರೆತ ಸುಳಿವಿನ ಅನ್ವಯ ಮಡಿಕೇರಿ ಗ್ರಾಮಾಂತರ ಪೊಲೀಸರು ನಿನ್ನೆ ಅಪರಾಹ್ನ ಮೂರ್ನಾಡುವಿನ ಭವಾನಿ ಹೋಂಸ್ಟೇಗೆ ಧಾಳಿ ನಡೆಸಿದಾಗ ಅಲ್ಲಿನ ಸ್ಥಿತಿ ಕಂಡು “ಹೀಗೂ ಇದೆಯೇ?” ಎನ್ನುವ ಭಾವನೆ ಮೂಡಿತು. ಹೋಂ ಸ್ಟೇನಲ್ಲಿ ಕಾಂಡೋಂಗಳ ರಾಶಿ ಎದುರಾಯಿತು. ಇಬ್ಬರು ವಿವಾಹಿತ ಮಹಿಳೆಯರನ್ನು ಬಳಸಿಕೊಂಡು ರಾಜಾರೋಷವಾಗಿ ಹಗಲು ವೇಳೆಯೇ ವೇಶ್ಯಾವಾಟಿಕೆ ಕಣ್ಣೆದುರಿಗೇ ಪೊಲೀಸರಿಗೆ ಗೋಚರ ವಾಯಿತು. ಮಹಿಳೆಯರಿಬ್ಬರನ್ನು ವಿಚಾರಿಸಿದಾಗ ಹಣದ ಅವಶ್ಯಕತೆ ಗೋಸ್ಕರ ಅವರು ಬಲಿಯಾಗಿರುವದು ಸ್ಪಷ್ಟಗೊಂಡಿತು. ಇಬ್ಬರೂ ಸುಮಾರು 35 ವಯಸ್ಸಿನವರಾಗಿದ್ದು ವೀರಾಜಪೇಟೆ ಯವರು. ಒಬ್ಬಾಕೆಯ ಗಂಡ ಅನಾರೊಗ್ಯದಿಂದ ಹಾಸಿಗೆ ಹಿಡಿದಿದ್ದರೆ, ಮತ್ತೊಬ್ಬಾಕೆಯ ಗಂಡ ಆಕೆಯನ್ನು ಬಿಟ್ಟು ದೂರ ತೆರಳಿದ್ದಾರೆ. ಇಬ್ಬರಿಗೂ ಮೂವರು ಪುಟ್ಟ ಮಕ್ಕಳಿದ್ದಾರೆ. ಆರ್ಥಿಕ ಸಂಕಷ್ಟ ಅವರನ್ನು ಈ ಸ್ಥಿತಿಗೆ ತಳ್ಳಿದೆ ಎಂಬದು ವಾಸ್ತವ ಕೇವಲ 10 ನಿಮಿಷದಲ್ಲಿ
ರೂ. 1 ಸಾವಿರ ದೊರೆಯುತ್ತದೆ. ಬದುಕಲು ಅನ್ಯಮಾರ್ಗವಿಲ್ಲವಾದುದ ರಿಂದ ಇದರಲ್ಲಿ ತೊಡಗಿಸಿ ಕೊಂಡಿರುವದಾಗಿ ಮಹಿಳೆಯರು ಪೊಲೀಸರೊಂದಿಗೆ ಅಸಹಾಯಕತೆ ತೋಡಿಕೊಂಡಿದ್ದಾರೆ.
ಭವಾನಿ ಹೋಂಸ್ಟೇ ಮಾಲೀಕ ಕಾಂತೂರು ಮೂರ್ನಾಡುವಿನ ನಿವಾಸಿ ಭೀಮಯ್ಯ ಧಾಳಿ ಸಂದರ್ಭ ತಲೆ ಮರೆಸಿಕೊಂಡಿದ್ದು, ಆರೋಪಿ ಶೋಧನೆಗೆ ಪೊಲೀಸರು ತೊಡಗಿದ್ದಾರೆ. ಧಾಳಿ ಸಂದರ್ಭ ಅವರ ಪತ್ನಿ ಅನಸೂಯ ಸ್ಥಳದಲ್ಲಿದ್ದು ಅವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸ ಲಾಗಿದೆ. ಅಲ್ಲದೆ ಈ ದಂಧೆಯಲ್ಲಿ ಗ್ರಾಹಕರಾಗಿದ್ದ ಕೇರಳದ ಐವರನ್ನು ಬಂಧಿಸಿದ್ದು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಕೇರಳ ರಾಜ್ಯದ ತಲಚೇರಿ ನಿವಾಸಿಗಳಾದ ಶಾಜಿ ಹಾಗೂ ದೇವದಾಸನ್, ಪೇರಾವೂರಿನ (ಮೊದಲ ಪುಟದಿಂದ) ನಿವಾಸಿ ಮನು, ಕೂತುಪರಂಬುವಿನ ನಿವಾಸಿಗಳಾದ ನಿಶಾದ್ ಮತ್ತು ಅಕ್ಷಯ್ ಬಂಧಿತರು. ಈ ಪೈಕಿ 55 ವಯಸ್ಸಿನ ದೇವದಾಸ್ ಮಾತ್ರ ಅವಿವಾಹಿತರಾಗಿದ್ದು, ಉಳಿದ ಎಲ್ಲರೂ ವಿವಾಹಿತರು ಎಂದು ಪೊಲೀಸ್ ಮೂಲದಿಂದ ತಿಳಿದು ಬಂದಿದೆ.
ಬಂಧಿತ ಆರೋಪಿಗಳಿಂದ ಎರಡು ಮೋಟಾರ್ ಸೈಕಲ್ಗಳು, 6 ಮೊಬೈಲ್ ಫೋನ್ಗಳು ಹಾಗೂ ರೂ. 22,030 ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿ ದ್ದಾರೆ. ರಕ್ಷಿಸಲ್ಪಟ್ಟ ಇಬ್ಬರು ಮಹಿಳೆಯರನ್ನು ಮಹಿಳಾ ರಕ್ಷಣಾ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಆಶ್ಷರ್ಯ ವೆಂದರೆ ಈ ಹೋಂಸ್ಟೇ ಪ್ರವಾಸೋದ್ಯಮ ಇಲಾಖೆಯಿಂದ ಅಧಿಕೃತ ಅನುಮತಿ ಪಡೆದಿದ್ದು ಮುಂದಿನ 2022 ಇಸವಿವರೆಗೂ ಪರವಾನಗಿ ನವೀಕರಣಗೊಂಡಿದೆ.
ಜಿಲ್ಲಾ ಪೊಲೀಸ್ ಅಧೀüಕ್ಷಕಿರಾದ ಸುಮನ್ ಡಿ. ಪಣ್ಣೇಕರ್ ಅವರ ನಿರ್ದೇಶನದಂತೆ ಮಡಿಕೇರಿ ಉಪ ವಿಭಾಗ ಪೊಲೀಸ್ ಉಪ ಅಧೀಕ್ಷಕ ದಿನೇಶ್ ಕುಮಾರ್ ಅವರ ಮಾರ್ಗ ದರ್ಶನದಂತೆ ಮಡಿಕೇರಿ ಗ್ರಾಮಾಂ ತರ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಮಡಿಕೇರಿ ಗ್ರಾಮಾಂತರ ಠಾಣೆಯ ಉಪ ನಿರೀಕ್ಷಕ ವಿ. ಚೇತನ್, ಸಿಬ್ಬಂದಿ ಗಳಾದ ರವಿಕುಮಾರ್, ಕಿರಣ್, ಚರ್ಮಣ್ಣ, ಪ್ರೇಮ್ಕುಮಾರ್, ದಿನೇಶ್ ಕೆ.ಡಿ., ಇಟ್ನಪ್ಪ ಹೊರಟ್ಟಿ, ಶ್ರೀಮತಿ ವೀಣಾ, ಕುಮಾರಿ ಸುಕನ್ಯಾ, ಚಾಲಕರಾದ ಭಾನುಪ್ರಕಾಶ್ ಹಾಗೂ ಪ್ರವೀಣ್ ಕುಮಾರ್ ಧಾಳಿ ನಡೆಸಿದ ತಂಡದಲ್ಲಿದ್ದರು. ತಂಡದ ಕಾರ್ಯ ವೈಖರಿಗೆ ಎಸ್.ಪಿ. ಸುಮನ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.