ಸುಂಟಿಕೊಪ್ಪ, ಅ. 14: ಬಿಜೆಪಿ ಸ್ಥಾನೀಯ ಸಮಿತಿಯ ವತಿಯಿಂದ 7 ಬೂತುಗಳ ಸಮಿತಿಯ ಅಧ್ಯಕ್ಷರು ಗಳ ಆಯ್ಕೆಯು ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ನಗರಾಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್, ಪ್ರತಿಯೊಬ್ಬ ಕಾರ್ಯಕರ್ತರು ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ಈಗಿನಿಂದಲೇ ಮನೆಮನೆಗೆ ತೆರಳಿ ಬಿಜೆಪಿಯ ಅಧಿಕಾರದ ಅಭಿವೃದ್ಧಿ ಕಾರ್ಯವನ್ನು ತಿಳಿಸಬೇಕು. ಪಕ್ಷದಲ್ಲಿ ಹೊಂದಾಣಿಕೆ ಮುಖ್ಯ. ಆಗಿಂದಾಗ್ಗೆ ಸಭೆ ಕರೆದು ಕಾರ್ಯಕರ್ತರ ಸಮಸ್ಯೆ ಮತ್ತು ಪಕ್ಷದ ಬಗ್ಗೆ ಚರ್ಚೆ ನಡೆಸಬೇಕು ಎಂದರು.
ತಾ.ಪಂ. ಸದಸ್ಯೆ ಓಡಿಯಪ್ಪನ ವಿಮಲಾವತಿ ಮಾತನಾಡಿ, ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಭದ್ರ ಕೋಟೆಯಾಗಿಯೇ ಮುಂದುವರೆಯ ಬೇಕು. ಬಡವರ ಒಳಿತಗಾಗಿ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಅವುಗಳ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ ಎಂದರು.
ಯುವಮೋರ್ಚಾ ಅಧ್ಯಕ್ಷ ರಂಜಿತ್ ಪೂಜಾರಿ, ಮಾಜಿ ನಗರಾಧ್ಯಕ್ಷ ಬಿ.ಕೆ. ಮೋಹನ್, ನಗರ ಕಾರ್ಯದರ್ಶಿ ಬಿ.ಕೆ. ಪ್ರಶಾಂತ್ ಕುಮಾರ್, ಹಿಂದುಳಿದ ವರ್ಗಗಳ ಅಧ್ಯಕ್ಷ ವಿ.ಕೆ ರಾಜ, ಗ್ರಾ.ಪಂ. ಸದಸ್ಯ ರಾದ ಜ್ಯೋತಿ, ಗಿರಿಜಾ, ಸಿ.ಚಂದ್ರ, ಬಿ.ಎಂ. ಸುರೇಶ್ ಇತರರು ಇದ್ದರು.