ಮಡಿಕೇರಿ, ಅ. 14: ಪುಣೆಯಲ್ಲಿ ನಡೆದ ಐಸಿಎಸ್‍ಇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕಂಜಿತಂಡ ಕುಶಾಲಪ್ಪ ಚಂಗಪ್ಪ 1500 ಮೀ. ಹಾಗೂ 3000 ಮೀ. ಓಟದಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಗಳಿಸಿದ್ದಾನೆ. ಅಲ್ಲದೆ ಪಂಜಾಬ್‍ನ ಪಾಟಿಯಾಲದಲ್ಲಿ ನಡೆಯುವ ಎಸ್‍ಜಿಎಫ್‍ಎ ಕ್ರೀಡಾಕೂಟದಲ್ಲಿ ಐಸಿಎಸ್‍ಇ ತಂಡವನ್ನು ಪ್ರತಿನಿಧಿಸಲಿದ್ದಾನೆ. ಈತ ಮೂಲತಃ ಜಿಲ್ಲೆಯ ನಿವಾಸಿ, ಇದೀಗ ಮೈಸೂರಿನಲ್ಲಿ ನೆಲೆಸಿರುವ ಕಂಜಿತಂಡ ಕುಶಾಲಪ್ಪ ಹಾಗೂ ಆಶಿಕಾ ದಂಪತಿಯರ ಪುತ್ರ.