ಕುಶಾಲನಗರ, ಅ. 14: ಕುಶಾಲನಗರ ಕನ್ನಡ ಭಾರತಿ ಪದವಿಪೂರ್ವ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಾರ್ಥಿ ಗಳಿಂದ ಕಾವೇರಿ ನದಿ ತಟದ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಕುಶಾಲನಗರ ಅಯ್ಯಪ್ಪಸ್ವಾಮಿ ದೇವಾಲಯ ಬಳಿ ನದಿಗೆ ಅಳವಡಿಸಲಾಗಿರುವ ಮೆಟ್ಟಿಲುಗಳಲ್ಲಿ ತ್ಯಾಜ್ಯಗಳನ್ನು ತೆರವುಗೊಳಿಸಿದ ವಿದ್ಯಾರ್ಥಿಗಳು, ತಟದಲ್ಲಿದ್ದ ಪ್ಲಾಸ್ಟಿಕ್, ಬಟ್ಟೆ ಮತ್ತಿತರ ತ್ಯಾಜ್ಯಗಳನ್ನು ಹೆಕ್ಕಿ ಸ್ವಚ್ಛಗೊಳಿಸಿದರು. ಇದೇ ಸಂದರ್ಭ ಕನ್ನಡ ಭಾರತಿ ಕಾಲೇಜು ಆವರಣದ ಸಂಪರ್ಕ ರಸ್ತೆ ಸ್ವಚ್ಛಗೊಳಿಸುವದರೊಂದಿಗೆ ಆವರಣದಲ್ಲಿ ಗಿಡವೊಂದು ನೆಡಲಾಯಿತು.

ಈ ಸಂದರ್ಭ ಕಾವೇರಿ ನದಿ ಸ್ವಚ್ಛತಾ ಆಂದೋಲನದ ಸಂಚಾಲಕರಾದ ಎಂ.ಎನ್. ಚಂದ್ರಮೋಹನ್, ಪ್ರಮುಖರಾದ ಡಿ.ಆರ್.ಸೋಮಶೇಖರ್, ಕೃಷ್ಣಮೂರ್ತಿಭಟ್, ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಾಧಿಕಾರಿಗಳಾದ ಮಂಜುನಾಥ್, ರುದ್ರಾಚಾರ್ ಮತ್ತಿತರರು ಇದ್ದರು.