ಮಡಿಕೇರಿ, ಅ. 14: ಕೇಂದ್ರ ಸರ್ಕಾರವು ದೇಶದಲ್ಲಿ ನೂತನ ಮೋಟಾರು ವಾಹನ ಕಾಯ್ದೆಯನ್ನು ಜಾರಿಗೊಳಿಸಿತು. ಈ ಕಾಯ್ದೆ ಜಾರಿಯಿಂದ ವಾಹನ ಮಾಲೀಕರು-ಚಾಲಕರಿಗೆ ತಮ್ಮ ಕೈ ಮೀರಿದ ದಂಡ ಮೊತ್ತವನ್ನು ಪಾವತಿಸುವ ಆಘಾತ ತಲೆದೋರಿತು. ದೇಶದಾದ್ಯಂತ ಈ ಬಗ್ಗೆ ಬಾರಿ ಪ್ರತಿರೋಧ ವ್ಯಕ್ತಗೊಂಡಿದ್ದು ಕೇಂದ್ರ ಸರ್ಕಾರವು ಕಾಯ್ದೆಯನ್ನು ಜಾರಿಗೊಳಿಸುವ ಮೊದಲು ಆಯಾ ರಾಜ್ಯಗಳು ಅದಕ್ಕೆ ತಿದ್ದುಪಡಿ ಮಾಡುವ ಅವಕಾಶ ಕಲ್ಪಿಸಿತು. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು ಕೇಂದ್ರವು ಘೋಷಿಸಿದ್ದ ಮೋಟಾರು ವಾಹನ ಕಾಯ್ದೆಗೆ ಅಗತ್ಯ ತಿದ್ದುಪಡಿಗಳನ್ನು ಮಾಡುವ ಮೂಲಕ ಅಧಿಕೃತವಾಗಿ ಜಾರಿಗೊಳಿಸಿದೆ. ಈ ಕುರಿತಾದ ವಿವರ ಮಾಹಿತಿಯನ್ನು ಕೊಡಗಿನ ವಾಹನ ಮಾಲೀಕರು-ಚಾಲಕರ ಅನುಕೂಲಕ್ಕಾಗಿ ಪ್ರಕಟಿಸಲಾಗಿದೆ. ವಿವರ ಮಾಹಿತಿಯನ್ನು ಮಡಿಕೇರಿ ಆರ್.ಟಿ.ಓ. ಕಚೇರಿಯ ಅಧೀಕ್ಷಕ ಶಿವಣ್ಣ ಅವರು ‘ಶಕ್ತಿ’ಗೆ ನೀಡಿದ್ದಾರೆ.ಪಾಸ್ ಹಾಗೂ ಟಿಕೇಟ್ ರಹಿತ ಪ್ರಯಾಣಿಸಿದರೆ, ನಿರ್ವಾಹಕರಿಂದ ಕರ್ತವ್ಯ ಲೋಪವಾದರೆ, ಗುತ್ತಿಗೆ ವಾಹನಗಳನ್ನು ಒದಗಿಸಲು ತಿರಸ್ಕರಿಸಿದರೆ ಹಾಗೂ ಇತ್ಯಾದಿಗಳಿಗೆ ರೂ.500 ದಂಡ, ಆಜ್ಞೆಯನ್ನು ತಿರಸ್ಕರಿಸಿದರೆ, ಅಡಚಣೆಗೆ ಹಾಗೂ ಮಾಹಿತಿ ನೀಡಲು ತಿರಸ್ಕರಿಸಿದರೆ ರೂ.1,000, ಅನಧಿಕೃತ ವ್ಯಕ್ತಿಯಿಂದ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನ ಚಾಲನೆಗೆ ರೂ.1,000, ಲಘು ವಾಹನ ಚಾಲನೆಗೆ ರೂ.2,000 ಹಾಗೂ ಇತರ ವಾಹನಗಳ ಚಾಲನೆಗೆ ರೂ.5,000 ದಂಡ ವಿಧಿಸಲಾಗುತ್ತದೆ. ಡ್ರೈವಿಂಗ್ ಲೈಸೆನ್ಸ್ ರಹಿತ ವಾಹನ ಚಾಲನೆ ಹಾಗೂ ವಯಸ್ಸಿನ ಮಿತಿ ತಲುಪದೆ ವಾಹನ ಚಲಾಯಿಸಿದರೆ, ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳಿಗೆ ರೂ.1000, ಲಘು ವಾಹನಗಳಿಗೆ ರೂ.2000 ದಂಡ, ಇತರ ವಾಹನಗಳಿಗೆ ರೂ. 5000 ದಂಡ, ಪರವಾನಗಿಗೆ ಸಂಬಂಧ ಪಟ್ಟ ಅಪರಾಧಗಳಿಗೆ ರೂ.10,000 ದಂಡ, ವಾಹನಗಳು ಹಾಗೂ ವಾಹನಗಳ ಅಂಗಗಳ ನಿರ್ಮಾಣ, ನಿರ್ವಹಣೆ, ಮಾರಾಟ, ನವೀಕರಣಕ್ಕೆ ಸಂಬಂಧಪಟ್ಟ ಅಪರಾಧಗಳಿಗೆ ಪ್ರತಿ ವಾಹನ ಹಾಗೂ

(ಮೊದಲ ಪುಟದಿಂದ) ಬಿಡಿ ಭಾಗಗಳಿಗೆ ರೂ. 1,00,000, ಈ ರೀತಿಯ ನವೀಕರಣಕ್ಕೆ ರೂ.5000 ದಂಡ ವಿಧಿಸಲಾಗುತ್ತದೆ. ಅತಿವೇಗದ ಚಾಲನೆಗೆ ದ್ವಿಚಕ್ರ, ತ್ರಿಚಕ್ರ ಹಾಗೂ ಲಘು ವಾಹನಗಳಿಗೆ ರೂ. 1,000, ಇತರ ವಾಹನಗಳಿಗೆ ರೂ. 2,000, ಅಪಾಯಕರವಾಗಿ ಚಲಾಯಿಸಿದರೆ ಮೊದಲನೆ ಬಾರಿ ದ್ವಿಚಕ್ರ, ತ್ರಿಚಕ್ರ ವಾಹನಗಳಿಗೆ ರೂ. 1500, ಲಘು ವಾಹನಗಳಿಗೆ ರೂ. 3000 ಹಾಗೂ ಇತರ ವಾಹನಗಳಿಗೆ ರೂ. 5000, ಎರಡನೆ ಬಾರಿಯ ಹಾಗೂ ನಂತರದ ಅಪರಾಧಕ್ಕೆ ರೂ. 10,000 ದಂಡ ವಿಧಿಸಲಾಗುತ್ತದೆ.ಮಾನಸಿಕ ಹಾಗೂ ದೈಹಿಕವಾಗಿ ವಾಹನ ಚಲಾಯಿಸಲು ಅನರ್ಹರಿದ್ದೂ ವಾಹನ ಚಾಲನೆ ಮಾಡಿದರೆ ಮೊದಲನೆ ಬಾರಿಯ ಅಪರಾಧಕ್ಕೆ ರೂ. 1,000, ನಂತರದ ಅಪರಾಧಕ್ಕೆ ರೂ. 2,000 ದಂಡ ಕಟ್ಟಬೇಕಾಗುತ್ತದೆ.

ರೇಸಿಂಗ್‍ಗೆ ರೂ. 5,000 ಮೊದಲನೆಯ ಬಾರಿ ಕಟ್ಟಿದರೆ, ಎರಡನೆ ಬಾರಿಯ ಹಾಗೂ ನಂತರದ ಅಪರಾಧÀಕ್ಕೆ ರೂ. 10,000 ನೀಡಬೇಕಾಗುತ್ತದೆ. ಅಸುರಕ್ಷಿತ ಸ್ಥಿತಿಯಲ್ಲಿ ವಾಹನವನ್ನು ಬಳಸಿದರೆ, ವಾಯು ಹಾಗೂ ಶಬ್ಧ ಮಾಲಿನ್ಯಕ್ಕೆ ಸಂಬಂಧಿಸಿದ ಗುಣಮಟ್ಟ ಉಲ್ಲಂಘನೆಗೆ ದ್ವಿಚಕ್ರ, ತ್ರಿಚಕ್ರ ವಾಹನಗಳಿಗೆ ರೂ. 1,500, ಇತರ ವಾಹನಗಳಿಗೆ ರೂ. 3,000, ನೋಂದಣಿಯಾಗದ ವಾಹನವನ್ನು ಬಳಸಿದರೆ ದ್ವಿಚಕ್ರ, ತ್ರಿಚಕ್ರ ವಾಹನಗಳಿಗೆ ರೂ. 2,000, ಲಘು ವಾಹನಗಳಿಗೆ ರೂ. 3,000 ಹಾಗೂ ಇತರ ವಾಹನಗಳಿಗೆ ರೂ. 5000 ದಂಡ ವಿಧಿಸಲಾಗುತ್ತದೆ. ಅನುಮತಿಗಿಂತ ಅಧಿಕ ತೂಕವನ್ನು ಹೊತ್ತೊಯ್ಯುವ ವಾಹನಗಳಿಗೆ ರೂ. 5,000 ದೊಂದಿಗೆ ಪ್ರತಿ ಹೆಚ್ಚುವರಿ ಟನ್‍ಗೆ ರೂ. 2,000 ದಂಡ ವಿಧಿಸಲಾಗುತ್ತದೆ. ಹೆಚ್ಚುವರಿ ಪ್ರಯಾಣಿಕರನ್ನು ಒಯ್ದರೆ ರೂ. 200, ತಲಾ ಹೆಚ್ಚುವರಿ ಪ್ರಯಾಣಿಕರ ಮೇಲೆ ದಂಡ ಬೀಳುತ್ತದೆ. ಸೀಟ್ ಬೆಲ್ಟ್ ಧರಿಸದೆ ಚಾಲನೆ, ದ್ವಿಚಕ್ರ ವಾಹನ ಸವಾರರು ಸುರಕ್ಷಿತ ಕ್ರಮಗಳನ್ನು ಉಲ್ಲಂಘನೆ ಮಾಡಿದಲ್ಲಿ ಹಾಗೂ ಹೆಲ್ಮೆಟ್ ಧರಿಸದೆ ವಾಹನ ಚಾಲನೆ ಮಾಡಿದರೆ ರೂ. 500 ದಂಡ, ತುರ್ತು ವಾಹನಗಳಿಗೆ ದಾರಿ ಬಿಡದಿದ್ದರೆ ರೂ. 1,000 ದಂಡ, ನಿಶ್ಶಬ್ದ ವಲಯಗಳಲ್ಲಿ ಹಾರ್ನ್ ಮಾಡಿದರೆ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳಿಗೆ ರೂ. 500, ಇತರ ವಾಹನಗಳಿಗೆ ರೂ. 1,000, ವಿಮೆ ರಹಿತ ವಾಹನ ಚಾಲನೆಗೆ ದ್ವಿಚಕ್ರ, ತ್ರಿಚಕ್ರ ವಾಹನಗಳಿಗೆ ರೂ. 1,000, ಲಘು ವಾಹನಗಳಿಗೆ ರೂ. 2,000, ಇತರ ವಾಹನಗಳಿಗೆ ರೂ. 4,000, ವಾಹನದೊಂದಿಗೆ ಅನಧಿಕೃತ ಮಧ್ಯಪ್ರವೇಶಕ್ಕೆ ರೂ.1,000, ಸೆಕ್ಷನ್ 62-ಎ ಉಲ್ಲಂಘನೆಗೆ ರೂ. 10,000, ಅನುಮತಿ ರಹಿತ ವಾಹನ ಬಳಕೆಗೆ ಮೊದಲನೆಯ ಅಪರಾಧಕ್ಕೆ ರೂ. 5,000 ಹಾಗೂ ನಂತರದ ಅಪರಾಧಕ್ಕೆ ರೂ. 10,000, ಇತರ ಸಾಮಾನ್ಯ ಅಪರಾಧಗಳಿಗೆ ಮೊದಲನೆ ಅಪರಾಧಕ್ಕೆ ರೂ. 500 ಹಾಗೂ ಎರಡನೆ ಬಾರಿಯ ಅಪರಾಧಕ್ಕೆ ರೂ.1,000 ದಂಡ ವಿಧಿಸಲಾಗುತ್ತದೆ.