ಭಾಗಮಂಡಲ,ಅ. 14: ಇಲ್ಲಿನ ಸರಕಾರಿ ಆಸ್ಪತ್ರೆ ವತಿಯಿಂದ ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ಮತ್ತು ತಲಕಾವೇರಿ ಜಾತ್ರಾ ಪ್ರಯುಕ್ತ ಪಟ್ಟಣದ ವಿವಿಧೆಡೆ ಸ್ವಚ್ಛತಾ ಕಾರ್ಯ ನಡೆಸಲಾಯಿತು.
ಅಲ್ಲದೆ ಭಾಗಮಂಡಲ ಮತ್ತು ತಲಕಾವೇರಿಯಲ್ಲಿ ನೀರಿನ ಶುದ್ಧೀಕರಣ ಮತ್ತು ಆರೋಗ್ಯದ ಬಗ್ಗೆ ಆರೋಗ್ಯ ಕಾರ್ಯಕರ್ತರು ಮಾಹಿತಿ ನೀಡಿದರು.ನಂತ ಮಾತನಾಡಿದ ಭಾಗಮಂಡಲ ವೈದ್ಯಾಧಿಕಾರಿ ಡಾ.ಪೊನ್ನಮ್ಮ ಸ್ವಚ್ಛತೆಯನ್ನು ಕಾಪಾಡುವದು ನಮ್ಮೆಲ್ಲರ ಕರ್ತವ್ಯ ಅಲ್ಲದೇ ಇನ್ನೂ ಕೆಲವೇ ದಿನಗಳಲ್ಲಿ ಪವಿತ್ರ ಕಾವೇರಿ ತೀರ್ಥೋದ್ಭವ ನಡೆಯಲಿದ್ದು ಪಟ್ಟಣದಲ್ಲಿ ಅಂಗಡಿ ಮುಂಗಟ್ಟು ಮಾಲೀಕರು ಸ್ವಚ್ಛತೆಯಡೆ ಗಮನ ಹರಿಸಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಕಡಿಮೆ ಪ್ರಮಾಣದಲ್ಲಿ ಉಪಯೋಗಿಸುವಂತೆ ಕರೆ ನೀಡಿದರು.
ಅಲ್ಲದೇ ಜಾತ್ರ ಪ್ರಯುಕ್ತ ಜಿಲ್ಲಾ ಆರೋಗ್ಯಧಿಕಾರಿಗಳು ನೂತನ ಪುರುಷ ಆರೋಗ್ಯ ಸಹಾಯಕರನ್ನು ಕರ್ತವ್ಯಕ್ಕೆ ನೇಮಿಸಿರುವದಾಗಿ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕರು, ದಾದಿಯರು ಪಾಲ್ಗೊಂಡಿದ್ದರು.