ಸಿದ್ದಾಪುರ, ಅ. 14: ಕೂಡಿಗೆಯ ಕಾಪ್ ಸೆಟ್ ಸಂಸ್ಥೆ ಹಾಗೂ ಓಡಿಪಿ ಸಂಸ್ಥೆಯ ಜಂಟಿ ಆಶ್ರಯದಲ್ಲಿ ನೆಲ್ಲಿಹುದಿಕೇರಿ ಗ್ರಾಮದ ಸಂತ್ರಸ್ತ ಕುಟುಂಬದ ಪೈಕಿ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ಜಿ.ಪಂ. ಸದಸ್ಯೆ ಸುನಿತಾ ಮಂಜುನಾಥ್ ವಿತರಿಸಿದರು.

ಕಾರ್ಯಕ್ರಮದಲ್ಲಿ ಓಡಿಪಿ ಸಂಸ್ಥೆಯ ಸಂಯೋಜಕಿ ಮೈಸೂರಿನ ಮೋಳಿ ಪೊಡ್ತದೊ, ಜಿಲ್ಲಾ ಸಂಯೋಜಕಿ ಜಾಯ್ಸ್ ಮೆನೇಜಸ್, ತಾ.ಪಂ. ಸದಸ್ಯೆ ಸುಹಾದಾ, ಗ್ರಾ.ಪಂ. ಉಪಾಧ್ಯಕ್ಷೆ ಸಫಿಯಾ, ಕೂಡಿಗೆಯ ಕಾಪ್ ಸೆಟ್ ಸಂಸ್ಥೆಯ ಡಾ. ಸುರೇಶ್, ಗ್ರಾ.ಪಂ. ಪಿಡಿಓ ಅನಿಲ್‍ಕುಮಾರ್, ಓಡಿಪಿ ಕಾರ್ಯಕರ್ತೆ ವಿಜಯನಾರಾಯಣ, ಗ್ರೇಸಿ ಮಣಿ ಹಾಗೂ ಗ್ರಾ.ಪಂ. ಸದಸ್ಯರು ಹಾಜರಿದ್ದರು.