ಮಡಿಕೇರಿ, ಅ.14 : ಎಸ್‍ವೈಎಸ್ ಕೊಂಡಂಗೇರಿ ಶಾಖೆಯ ವಾರ್ಷಿಕ ಮಹಾಸಭೆಯು ಸಂಘಟನೆಯ ಜಿಲ್ಲಾಧ್ಯಕ್ಷ ಬಹು ಹಫೀಳ್ ಸಹದಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕೊಂಡಂಗೇರಿ ಶಾದಿ ಮಹಲ್‍ನಲ್ಲಿ ನಡೆದ ಸಭೆಯಲ್ಲಿ ಎಸ್‍ವೈಎಸ್ ರಾಜ್ಯ ಸಮಿತಿ ಸದಸ್ಯರಾದ ಪಿ.ಎ.ಯೂಸುಫ್, ಪಿ.ಯು.ಹನೀಫ್ ಸಖಾಫಿ, ಕೆಸಿಎಫ್ ಸೌದಿ ಅರೇಬಿಯಾ ಸಾರಥಿ ಖಾಸಿಂ ಸಖಾಫಿ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು. ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಷಂಶುದ್ದೀನ್ ಅಂಜದಿ ಅವರು 21 ಸದಸ್ಯರನ್ನೊಳಗೊಂಡ ನೂತನ ಸಮಿತಿಯನ್ನು ರಚಿಸಿದರು.
ಕೊಂಡಂಗೇರಿ ಶಾಖೆಯ ನೂತನ ಅಧ್ಯಕ್ಷರಾಗಿ ಹೆಚ್.ಎ.ಶಾದುಲಿ ಮುಸ್ಲಿಯಾರ್, ಉಪಾಧ್ಯಕ್ಷರಾಗಿ ಜೆ.ಎಂ. ಇಬ್ರಾಹಿಂ, ಕಾರ್ಯದರ್ಶಿ ಜೆ.ಎಸ್. ಮೊಹಮದ್ ಹನೀಫ್, ಇಸ್ವಾಭ ಕಾರ್ಯದರ್ಶಿ ಎಂ.ಜಿ. ಅಬ್ದುಲ್ ಲತೀಫ್ ಮುಸ್ಲಿಯಾರ್, ಅಂಜದಿ ದಅïವ ಕಾರ್ಯದರ್ಶಿ ಅಬ್ದುಲ್ ಹಮೀದ್ ಹಾಗೂ ಖಜಾಂಚಿಯಾಗಿ ಎಂ.ಎಸ್.ಕರೀಂ ಹಾಜಿ ಆಯ್ಕೆಯಾದರು. ಕಳೆದ ಸಾಲಿನ ಸಮಿತಿ ಕೈಗೊಂಡ ಉತ್ತಮ ಕಾರ್ಯಗಳ ಬಗ್ಗೆ ಸಭೆ ಪ್ರಶಂಸೆ ವ್ಯಕ್ತಪಡಿಸಿತು. ನೂತನ ಆಡಳಿತ ಮಂಡಳಿಗೆ 300 ಕ್ಕೂ ಅಧಿಕ ಸದಸ್ಯರನ್ನು ಸೇರ್ಪಡೆಗೊಳಿಸಿದ ಪದಾಧಿಕಾರಿಗಳನ್ನು ಅತಿಥಿ ಗಣ್ಯರು ಅಭಿನಂದಿಸಿದರು.