ಸುಂಟಿಕೊಪ್ಪ,ಅ.13: ಪೊಲೀಸ್ ಇಲಾಖೆ ವತಿಯಿಂದ ಠಾಣೆಯ ಆವರಣದಲ್ಲಿ ನೂತನ ಠಾಣಾಧಿಕಾರಿ ಯಾದ ಬಿ.ತಿಮ್ಮಪ್ಪ ಅವರ ಅಧ್ಯಕ್ಷತೆಯಲ್ಲಿ ಜನಸಂಪರ್ಕ ಸಭೆಯನ್ನು ನಡೆಸಲಾಯಿತು. ಸಾರ್ವಜನಿಕರ ಕುಂದುಕೊರತೆ ಆಲಿಸಿದ ಠಾಣಾಧಿಕಾರಿ ಬಿ.ತಿಮ್ಮಪ್ಪ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯುವಕರು ಗಾಂಜಾ, ಮಾದಕ ವಸ್ತುಗಳ ದುಶ್ಚಟಗಳಿಗೆ ಬಲಿಯಾಗುತ್ತಿದ್ದು, ಶಾಲಾ ವಠಾರ, ಜನನಿ ಬಿಡ ಪ್ರದೇಶ ಗಳಲ್ಲಿ ಕುಳಿತು ಸಾರ್ವ ಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿ ದ್ದಾರೆ ಎಂಬ ದೂರು ಗಳು ಬಂದಿವೆ. ಆದಷ್ಟು ಬೇಗನೇ ಇದನ್ನು ನಿಯಂತ್ರಿಸುವ ಕೆಲಸ ಮಾಡಲಾಗುವದು.

ಅಲ್ಲದೇ ರಾಷ್ಟ್ರೀಯ ಹೆದ್ದಾರಿ ಸುಂಟಿಕೊಪ್ಪ ಹೊಸಕೋಟೆ, ಕೆದಕಲ್ ವ್ಯಾಪ್ತಿಯಲ್ಲಿ ದನಕರುಗಳ ಹಾವಳಿ ಹೆಚ್ಚಾಗಿರುವದು ವಾಹನಗಳ ಅಪಘಾತಕ್ಕೂ ಕಾರಣವಾಗಿದೆ, ಈ ಬಗ್ಗೆ ಗ್ರಾಮ ಪಂಚಾಯಿತಿಗಳ ಗಮನಕ್ಕೆ ತರಲಾಗುವದು ನಂತರ ಮಾಲೀಕರಿಗೆ ಎಚ್ಚರಿಕೆಯನ್ನು ನೀಡಿ ಅದಕ್ಕೂ ಯಾವದೇ ಸ್ಪಂದನೆ ದೊರೆಯದಿದ್ದಲ್ಲಿ ಗೋವುಗಳನ್ನು ಮೈಸೂರಿನ ಗೋಶಾಲೆಗಳಿಗೆ ರವಾನಿಸಲಾಗುವದು ಎಂದರು.

ಎಎಸ್‍ಐಗಳಾದ ಶಿವಪ್ಪ, ಕಾವೇರಪ್ಪ, ಸಿಬ್ಬಂದಿಗಳಾದ ಖಾದರ್, ಸತೀಶ್, ಹರೀಶ್, ಬಿಜೆಪಿ ನಗರಾಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್, ಕರಾವೇ ಅಧ್ಯಕ್ಷ ನಾಗೇಶ್ ಪೂಜಾರಿ, ಗ್ರಾ.ಪಂ.ಸದಸ್ಯ ಕೆ.ಇ.ಕರೀಂ, ಆಟೋ ಚಾಲಕರ ಸಂಘದ ಸ್ಥಾಪಕಾಧ್ಯಕ್ಷ ಗ್ಯಾಬ್ರಿಯಲ್ ಡಿಸೋಜಾ, ಅಧ್ಯಕ್ಷ ಬಿ.ಕೆ,ಪ್ರಶಾಂತ್ ಕುಮಾರ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಇದ್ದರು.