ಮಡಿಕೇರಿ, ಅ. 13: ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಪಿಯುಸಿ ವಿದ್ಯಾರ್ಥಿಗಳಿಗೆ ಬಾಗಲ ಕೋಟೆ ನಗರದಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಬಾಲಕಿಯರ ಹಾಕಿ ಟೂರ್ನಿಯಲ್ಲಿ ಮಡಿಕೇರಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಬಾಲಕಿಯರ ತಂಡವು ರಾಷ್ಟ್ರೀಯ ಹಾಕಿ ಟೂರ್ನಿಗೆ ಆಯ್ಕೆಗೊಂಡಿದೆ.
ಬಾಗಲಕೋಟೆಯಲ್ಲಿ ಮುಕ್ತಾಯಗೊಂಡ ಪಿಯು ವಿಭಾಗದ ಬಾಲಕಿಯರ ಹಾಕಿ ಅಂತಿಮ ಪಂದ್ಯಾಟದಲ್ಲಿ ಮಡಿಕೇರಿ ಕಾಲೇಜಿನ ತಂಡವು ಎದುರಾಳಿ ಮೈಸೂರು ತಂಡವನ್ನು 3-2 ಗೋಲುಗಳಿಂದ ಪರಾಭವಗೊಳಿಸಿ ರಾಷ್ಟ್ರೀಯ ಟೂರ್ನಿಗೆ ಆಯ್ಕೆಗೊಂಡಿದೆ ಎಂದು ಕಾಲೇಜಿನ ಪ್ರಾಂಶುಪಾಲ ಪಿ.ಆರ್. ವಿಜಯ್ ತಿಳಿಸಿದ್ದಾರೆ. ಮಡಿಕೇರಿ ಕಾಲೇಜಿನ ತಂಡವು ಸೆಮಿಫೈನಲ್ ಟೂರ್ನಿಯಲ್ಲಿ ಚಿಕ್ಕೋಡಿ ಜಿಲ್ಲಾ ತಂಡವನ್ನು 10-0 ಗೋಲುಗಳಿಂದ ಪರಾಭವಗೊಳಿಸಿದೆ. ರಾಷ್ಟ್ರೀಯ ಹಾಕಿ ಟೂರ್ನಿಯು ಬರುವ ನವೆಂಬರ್‍ನಲ್ಲಿ ಪಂಜಾಬ್ ನಲ್ಲಿ ನಡೆಯಲಿದೆ ಎಂದು ತಿಳಿಸಲಾಗಿದೆ. ಕಾಲೇಜಿನ ಉಪನ್ಯಾಸ ಕರೂ ಆದ ಉಪನ್ಯಾಸಕಿ ಕೆ.ವೈ. ಸವಿತ ತಂಡದ ಮೆನೇಜರ್ ಆಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ. ಎನ್.ಎಸ್. ಚಿದಾನಂದ ಅವರು ಕ್ರೀಡಾಳುಗಳಿಗೆ ತರಬೇತು ನೀಡಿದ್ದರು.