ಸಿದ್ದಾಪುರ, ಅ. 13: ವಿಶ್ವ ಶಾಂತಿಗೆ ಧಾರ್ಮಿಕ ವಿದ್ಯೆ ಎಂಬ ಅಧ್ಯಾಪಕ ದಿನಾಚರಣೆಯು ಮುನವ್ವಿರುಲ್ ಇಸ್ಲಾಂ ಮದರಸ ಸಭಾಂಗಣದಲಿ ನಡೆಯಿತು.
ಜುಮಾ ನಮಾಜಿನ ನಂತರ ಸಿದ್ದಾಪುರ ಮುಸ್ಲಿಂ ಜಮಾಅತ್ ಅಧ್ಯಕ್ಷ ಕೆ. ಉಸ್ಮಾನ್ ಹಾಜಿ ಧ್ವಜಾರೋಹಣ ನೆರವೇರಿಸಿದರು. ಮಗ್ರೀಬ್ ನಮಾಜ್ ನಂತರ ಮಖಾಂ ಝಿಯಾರತ್‍ನೊಂದಿಗೆ ಮದರಸ ಸಭಾಂಗಣದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಿತು.
ಸಿದ್ದಾಪುರ ಜುಮ್ಮಾ ಮಸೀದಿಯ ಖತೀಬ್ ನೌಫಲ್ ಹುದವಿ ಉದ್ಘಾಟನೆ ನೆರವೇರಿಸಿದರು. ಮುಖ್ಯ ಭಾಷಣಕಾರರಾಗಿ ಒಂಟಿಯಂಗಡಿ ಮಸೀದಿಯ ಖತೀಬ್ ಸಿದ್ದಿಕ್ ವಾಫಿ ಪಾಲ್ಗೊಂಡಿದ್ದರು.
ಮದರಸಾ ಮುಖ್ಯ ಅಧ್ಯಾಪಕ ಆರಿಫ್ ಫೈಝಿ, ಅಧ್ಯಾಪಕರುಗಳಾದ ಯೂಸೂಫ್ ಉಸ್ತಾದ್, ಅನೀಫ್ ಉಸ್ತಾದ್, ಅಲವಿ ಉಸ್ತಾದ್, ಮೊಯ್ದಿನ್ ಉಸ್ತಾದ್ ಅವರ ಸೇವೆಗೆ ಸನ್ಮಾನಿಸಿ ಗೌರವಿಸಲಾಯಿತು
ಈ ಸಂದರ್ಭ ಮುಸ್ಲಿಂ ಜಮಾಅತ್ ಪ್ರಮುಖರಾದ ಸೌಕತ್ ಹಾಜಿ, ರಹೂಫ್ ಹಾಜಿ, ಇಸ್ಮಾಯಿಲ್, ಅಲಿ, ಅಸ್ಕರ್, ನವಾಜ್, ನಜೀರ್, ಸಮೀರ್ ಸೇರಿದಂತೆ ಮತ್ತಿತರರು ಹಾಜರಿದ್ದರು.