ಗೋಣಿಕೊಪ್ಪ ವರದಿ, ಅ. 13: ಪೊನ್ನಂಪೇಟೆ ಮಾಜಿ ಸೈನಿಕರ ಸಂಘದ ವಾರ್ಷಿಕ ಮಹಾಸಭೆ ಇತ್ತೀಚೆಗೆ ಇಲ್ಲಿನ ಕೊಡವ ಸಮಾಜ ಸಭಾಂಗಣದಲ್ಲಿ ಅಧ್ಯಕ್ಷ ಐನಂಡ ಕೆ. ಮಂದಣ್ಣ ಅಧ್ಯಕ್ಷತೆಯಲ್ಲಿ ನಡೆಯಿತು.
ಸದಸ್ಯರು ಪಡೆಯುವ ಪಿಂಚಣಿಯಲ್ಲಿ ಸಮಸ್ಯೆ ಇದ್ದರೆ ಸಂಘದ ಬೆಂಬಲ ಪಡೆದುಕೊಂಡು ಮುಂದುವರಿಯುವಂತೆ ನಿರ್ಧರಿಸಲಾಯಿತು.
ಮಡಿಕೇರಿ ನಗರದಲ್ಲಿ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ ಪ್ರತಿಮೆ ಸ್ಥಾಪನೆಗೆ ಮಾಜಿ ಸೈನಿಕರು ಒತ್ತಾಯಿಸುವಂತೆ, ಸರ್ಕಾರದ ಕೃಷಿ ಪರಿಹಾರ ನೀತಿಯಲ್ಲಿ ಮತ್ತು ಕೇಂದ್ರ ಸರ್ಕಾರದ ಕೃಷಿ ಪಿಂಚಣಿ ಯೋಜನೆಯಲ್ಲಿ ಮಾಜಿ ಸೈನಿಕರಿಗೂ ಕಲ್ಪಿಸುವಂತೆ ಒತ್ತಾಯಿಸುವಂತೆ ನಿರ್ಧರಿಸಲಾಯಿತು. ಈ ಸಂದರ್ಭ ಶೌರ್ಯಚಕ್ರ ಪುರಸ್ಕøತ ಹೆಚ್.ಎನ್. ಮಹೇಶ್ ಅವರನ್ನು ಸನ್ಮಾನಿಸಲಾಯಿತು.