ವೀರಾಜಪೇಟೆ, ಅ. 13: ವೀರಾಜಪೇಟೆ ಕೊಡಗು ಖಾಸಗಿ ಬಸ್ ಕಾರ್ಮಿಕ ಸಂಘದ ವತಿಯಿಂದ ಹಲವಾರು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿದ್ದ ಅಯುಧ ಪೂಜಾ ಮತ್ತು ಸಾಂಸ್ಕøತಿಕ ಕಾರ್ಯಕ್ರಮವನ್ನು ಈ ಬಾರಿ ತೋರ ಸಮೀಪದ ಕುರ್ತಿಕಾಡು ಎಂಬಲ್ಲಿ ಸಂಭವಿಸಿದ ಜಲಪ್ರಳಯದ ಕಾರಣದಿಂದ ರದ್ದುಪಡಿಸಿ ಕೇವಲ ಬಸ್‍ಗಳ ಅಲಂಕಾರ ಮಾಡಿ ಸಾಮೂಹಿಕವಾಗಿ ಪೂಜೆ ಸಲ್ಲಿಸಲಾಯಿತು.