ನಾಪೆÇೀಕ್ಲು, ಅ. 13: ಸಂಘ ಸಂಸ್ಥೆಗಳಿಂದ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗುವ ಶಿಬಿರಗಳು ಜನರೊಂದಿಗೆ ವ್ಯವಹರಿಸಲು, ಉತ್ತಮ ಮಾತುಗಾರಿಕೆಯ ಮೂಲಕ ಸಂವಹನ ನಡೆಸಲು ಸಹಕಾರಿಯಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಚ್ಚಾಡೋ ಹೇಳಿದರು.

ಸ್ಥಳೀಯ ಕರ್ನಾಟಕ ಪಬ್ಲಿಕ್ ಶಾಲೆಯ ಸಭಾಂಗಣದಲ್ಲಿ ವಿವೇಕಾನಂದ ಯೂತ್‍ಮೂವ್ ಮೆಂಟ್, ರೋಟರಿ ಮಿಸ್ಟಿ ಹಿಲ್ಸ್ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ದಸರಾ ಶಿಬಿರದಲ್ಲಿ ವಿದ್ಯಾರ್ಥಿಗಳ ಚಟುವಟಿಕೆಗಳನ್ನು ವೀಕ್ಷಿಸಿ ಅವರು ಮಾತನಾಡಿದರು. ವಿವಿಧ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಒಂದೇ ವೇದಿಕೆಯಲ್ಲಿ ಒಟ್ಟು ಗೂಡಿದಾಗ ಇತರರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಬೆಳೆಯಲು ಸಾಧ್ಯ. ಕಲಿತದನ್ನು ಮರೆಯದೆ ಉತ್ತಮ ಜೀವನ ರೂಪಿಸಲು ಸಾಧ್ಯ. ಶಿಬಿರವನ್ನು ಆಯೋಜಿಸಿದ ಶಿಕ್ಷಕರಿಗೆ ಮಕ್ಕಳ ಭವಿಷ್ಯದ ಬಗ್ಗೆ ಉತ್ತಮ ಚಿಂತನೆ ಇದ್ದು ಅವುಗಳನ್ನು ಮೈಗೂಡಿಸಿ ಕೊಂಡು ಸಮಾಜದ ಉತ್ತಮ ಪ್ರಜೆಗಳಾಗಬೇಕು ಎಂದರು.

ಶಿಕ್ಷಣಾಧಿಕಾರಿ ಕಾಶಿನಾಥ್ ಮಾತನಾಡಿ ನಿತ್ಯದ ಶಾಲಾ ಚಟುವಟಿಕೆಗಳಿಗಿಂತ ವಿಭಿನ್ನವಾಗಿರುವ ಶಿಬಿರವು ವೈಯಕ್ತಿಕ ವ್ಯಕ್ತಿತ್ವ ರೂಪಿಸಲು ಸಹಕಾರಿ. ಬೇರೆ ಬೇರೆ ಶಾಲೆಯ ಮಕ್ಕಳ ಒಡನಾಟದಿಂದ ತಾವು ಕಲಿತ ವಿಚಾರಗಳನ್ನು ಸ್ನೇಹಿತರೊಂದಿಗೆ ಕುಟುಂಬಸ್ಥರೊಂದಿಗೆ ಹಂಚಿ ಕೊಂಡಾಗ ಸ್ನೇಹ ಬಾಂಧವ್ಯ ವೃದ್ದಿಯಾಗುತ್ತದೆ. ವಿದ್ಯಾರ್ಥಿಗಳಲ್ಲಿ ಬದ್ದತೆ ಹಾಗೂ ಶಿಸ್ತು ಇದ್ದರೆ ಶಿಬಿರಗಳಿಂದ ಕಲಿತದ್ದನ್ನು ಭವಿಷ್ಯದಲ್ಲಿ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ಮಾತನಾಡಿ ನಾಲ್ಕು ಗೋಡೆಗಳ ನಡುವಿನ ಕಲಿಕೆಗಿಂತ ತರಗತಿಯ ಹೊರಗೆ ಕಲಿತದ್ದು ಗಟ್ಟಿಯಾಗುತ್ತದೆ. ಗಣಿತ ಮತ್ತು ವಿಜ್ಞಾನ ವಿಷಯಗಳು ಜೀವನ ಕೌಶಲ್ಯಗಳನ್ನು ಕಲಿಸುತ್ತದೆ. ಶಿಬಿರದಲ್ಲಿ ಎಲ್ಲರೂ ಒಟ್ಟಾಗಿ ಬೆರೆಯುವ ಅವಕಾಶ ದೊರಕಿದ್ದು ಈ ಅವಕಾಶವನ್ನು ಫಲಿತಾಂಶವನ್ನು ಉತ್ತಮ ಪಡಿಸಲು ವಿದ್ಯಾರ್ಥಿಗಳು ಉಪಯೋಗಿಸಿಕೊಳ್ಳಬೇಕು ಎಂದರು. ದಿನದ ಸಮಯವನ್ನು ವ್ಯರ್ಥ ಮಾಡದೆ ಯೋಜನಾಬದ್ದವಾಗಿ ಬಳಸಿಕೊಂಡಾಗ ವ್ಯಕ್ತಿತ್ವ ವಿಕಸನ ಸಾಧ್ಯ ಎಂದರು.

ಶಿಬಿರದಲ್ಲಿ ವಿದ್ಯಾರ್ಥಿಗಳಿಗಾಗಿ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಶಿಕ್ಷಕಿ ಉಷಾರಾಣಿ ಸ್ವಾಗತಿಸಿ ವಂದಿಸಿದರು.

ಕಾರ್ಯಕ್ರಮದಲ್ಲಿ ವಿವೇಕಾನಂದ ಯೂತ್ ಮೂವ್‍ಮೆಂಟಿನ ಕಾರ್ಯಕ್ರಮ ಸಂಯೋಜಕ ರವಿ, ಸಿಬ್ಬಂದಿಗಳು, ಶಿಕ್ಷಕರಾದ ತನುಜ, ಭಾರತಿ, ಭವ್ಯ, ಗಂಗಮ್ಮ, ಸಿ.ಎಸ್.ಸುರೇಶ್, ಪಾಲ್ಗೊಂಡಿದ್ದರು.

ವಿದ್ಯಾರ್ಥಿಗಳಿಗೆ ರಂಗೋಲಿ, ಬೆಂಕಿರಹಿತ ಅಡುಗೆ, ಗಾಳಿಪಟ ತಯಾರಿ, ಸೂಜಿನೂಲು ಓಟ, ಸೇರಿದಂತೆ ವೈವಿಧ್ಯ ಸ್ಪರ್ಧೆಗಳು ನಡೆದವು.