ಮಡಿಕೇರಿ, ಅ. 13: ಪ್ರಸಕ್ತ ಸಾಲಿನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮವು ಐಸಿಐಸಿಐ ಅಕಾಡೆಮಿ ಪಾರ್ ಸ್ಕಿಲ್ಸ್, ಐಸಿಐಸಿಐ ಫೌಂಡೇಶನ್ ಇವರ ಸಹಯೋಗದೊಂದಿಗೆ ಆಫೀಸ್ ಅಡ್ಮಿನಿಸ್ಟ್ರೇಷನ್ ಮತ್ತು ರಿಟೈಲ್ಸ್ ಸೇಲ್ಸ್ ಕೋರ್ಸ್‍ಗಳ ತರಬೇತಿ ಪಡೆಯಲು ಪರಿಶಿಷ್ಟ ಜಾತಿಯ ನಿರುದ್ಯೋಗಿ ಯುವಕ ಹಾಗೂ ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ.

ಪರಿಶಿಷ್ಟ ಜಾತಿಯ ಎಸ್‍ಎಸ್‍ಎಲ್‍ಸಿ ಪಾಸಾದ ಹಾಗೂ ಪಿಯುಸಿ ಹಾಗೂ ಪದವಿ ವಿದ್ಯಾರ್ಹತೆಯನ್ನು ಹೊಂದಿರುವ 18 ರಿಂದ 30 ವರ್ಷದೊಳಗಿರುವ ನಿರುದ್ಯೋಗಿ ವಿದ್ಯಾವಂತ ಯುವಕ ಹಾಗೂ ಯುವತಿಯರಿಗೆ ಐಸಿಐಸಿಐ ಅಕಾಡೆಮಿ ಪಾರ್ ಸ್ಕಿಲ್ಸ್, ಐಸಿಐಸಿಐ ಫೌಂಡೇಶನ್ ಇವರ ವತಿಯಿಂದ ಆಫೀಸ್ ಅಡ್ಮಿನಿಸ್ಟ್ರೇಷನ್ ಮತ್ತು ರಿಟೈಲ್ಸ್ ಸೇಲ್ಸ್ ಕೋರ್ಸ್‍ಗಳನ್ನು ಮೈಸೂರು ಅಥವಾ ಬೆಂಗಳೂರು ಕೇಂದ್ರಗಳಲ್ಲಿ ತರಬೇತಿ ನೀಡಲಾಗುವದು.

ತರಬೇತಿಯು 3 ತಿಂಗಳ ಅವಧಿಯಾಗಿದ್ದು, ಸಂಪೂರ್ಣ ಉಚಿತವಾಗಿದೆ. ತರಬೇತಿ ಅವಧಿಯಲ್ಲಿ ನಿಗಮದ ವತಿಯಿಂದ ಸ್ಥಳೀಯವಾಗಿ ಹಾಜರಾಗುವ ಅಭ್ಯರ್ಥಿಗಳಿಗೆ ಪ್ರತಿ ಮಾಹೆ ರೂ. 1,200 ಗಳ ಪ್ರಯಾಣ ವೆಚ್ಚ ಅಥವಾ ಬೇರೆ ಜಿಲ್ಲೆಗಳಿಂದ ತರಬೇತಿಗೆ ಹಾಜರಾಗುವ ಅಭ್ಯರ್ಥಿಗಳಿಗೆ ಪ್ರತಿ ಮಾಹೆ ರೂ. 5 ಸಾವಿರಗಳ ವಸತಿ ವೆಚ್ಚವಾಗಿ ಆಭ್ಯರ್ಥಿಗಳ ಖಾತೆಗೆ ನೇರವಾಗಿ ಪಾವತಿಸಲಾಗುವದು.

ತರಬೇತಿ ಪಡೆಯಲು ಆಸಕ್ತಿಯುಳ್ಳ ಅಭ್ಯರ್ಥಿಗಳು ನಗರದ ಜಿಲ್ಲಾ ವ್ಯವಸ್ಥಾಪಕರು ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಉಚಿತವಾಗಿ ಅರ್ಜಿ ಪಡೆದು ಅರ್ಜಿಯೊಂದಿಗೆ ಫೋಟೋ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, 10ನೇ ತರಗತಿ ಪಾಸಾಗಿರುವ ಅಂಕಪಟ್ಟಿ (ಕಡ್ಡಾಯ), ಪಿಯುಸಿ ಅಥವಾ ಪದವಿಯ ಅಂಕಪಟ್ಟಿ ಹಾಗೂ ಬ್ಯಾಂಕ್ ಖಾತೆ ಹೊಂದಿರುವ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿಗಳ ದಾಖಲಾತಿಗಳನ್ನು ದ್ವಿ ಪತ್ರಿಯಲ್ಲಿ ಜಿಲ್ಲಾ ಕಚೇರಿಗೆ ತಾ. 23 ರೊಳಗೆ ಸಲ್ಲಿಸಲು ತಿಳಿಸಿದೆ.

ತರಬೇತಿ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಐಸಿಐಸಿಐ ಅಕಾಡೆಮಿ ಫಾರ್ ಸ್ಕಿಲ್, ಮೈತ್ರಿ ಸೆಂಟರ್, ವೆಸ್ಟ್‍ವಿಂಗ್, ಹೊಸೂರು ರಸ್ತೆ, ಅಕ್ಸ್‍ಫರ್ಡ್ ಇಂಜಿನಿಯರಿಂಗ್ ಕಾಲೇಜು ಪಕ್ಕ, ದೊಮ್ಮನಹಳ್ಳಿ, ಬೆಂಗಳೂರು-560 068 ಶ್ರೀ ಮಧು, ದೂ.ಸಂ. 9611075559 ಇವರನ್ನು ಅಥವಾ ಕಚೇರಿ ದೂರವಾಣಿ ಸಂಖ್ಯೆ 08272-228857 ನ್ನು ಸಂಪರ್ಕಿಸಬಹುದು ಎಂದು ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.

ಪ್ಯಾರಮೇಟಿಕ್ಸ್ ಹುದ್ದೆಗಳನ್ನು ಭರ್ತಿ ಮಾಡಲು

ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಯಡಿ ಖಾಲಿಯಿರುವ ಒಟ್ಟು 6 ಪ್ಯಾರಮೇಟಿಕ್ಸ್ ಹುದ್ದೆಗಳನ್ನು ಭರ್ತಿ ಮಾಡಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳು ಫಾರ್ಮಿಸಿಸ್ಟ್ ಅಲ್ಲೋಪ್ಯಾತಿಕ್ 4, ಫಾರ್ಮಿಸಿಸ್ಟ್ ಅರ್ಯೂರ್ವೇದಿಕ್ 1, ಫಾರ್ಮಿಸಿಸ್ಟ್ ಕಮ್ ಕ್ಲಾರ್ಕ್ ಹೋಮಿಯೋಪ್ಯಾತಿಕ್ 1. ಫಾರ್ಮಿಸಿಸ್ಟ್ ಅಲ್ಲೋಪ್ಯಾತಿಕ್ ಹುದ್ದೆಗೆ ಮಾನ್ಯತೆ ಹೊಂದಿರುವ ಬೋರ್ಡ್ ಅಥವಾ ವಿಶ್ವವಿದ್ಯಾನಿಲಯದಿಂದ ದ್ವಿತೀಯ ಪಿ.ಯು.ಸಿ. ಭೌತಶಾಸ್ತ್ರ, ರಾಸಾಯನ ಶಾಸ್ತ್ರ, ಜೀವಶಾಸ್ತ್ರ ತೇರ್ಗಡೆ ಅಥವಾ ತತ್ಸಮಾನ ಪದವಿ ಹೊಂದಿರಬೇಕು. ಮಾನ್ಯತೆ ಪಡೆದ ಸಂಸ್ಥೆಯಿಂದ ಫಾರ್ಮಸಿ ವಿಷಯದಲ್ಲಿ ಡಿಪ್ಲೋಮಾ ಹೊಂದಿರಬೇಕು ಹಾಗೂ ಫಾರ್ಮಸಿ ಆಕ್ಟ್ 1948ರ ಅಡಿಯಲ್ಲಿ ಫಾರ್ಮಾಸಿಸ್ಟ್ ಆಗಿ ನೋಂದಣಿ ಹೊಂದಿರಬೇಕು ಹಾಗೂ ಫಾರ್ಮಸಿ ಆಕ್ಟ್ 1948ರ ಅಡಿಯಲ್ಲಿ ಫಾರ್ಮಾಸಿಸ್ಟ್ ಆಗಿ ನೋಂದಣಿ ಹೊಂದಿದ ನಂತರ ಮಾನ್ಯತೆ ಹೊಂದಿದ ಆಸ್ಪತ್ರೆ ಅಥವಾ ಫಾರ್ಮಸಿಯಲ್ಲಿ ಕನಿಷ್ಟ 2 ವರ್ಷಗಳ ಅನುಭವ ಹೊಂದಿರಬೇಕು ಅಥವಾ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಫಾರ್ಮಸಿ ವಿಷಯದಲ್ಲಿ ಪದವಿ ಹೊಂದಿರಬೇಕು ಮತ್ತು ಫಾರ್ಮಸಿ ಆಕ್ಟ್ 1948 ಅಡಿಯಲ್ಲಿ ಫಾರ್ಮಾಸಿಸ್ಟ್ ಆಗಿ ನೋಂದಣಿ ಹೊಂದಿರಬೇಕು.

ಫಾರ್ಮಸಿಸ್ಟ್ ಆಯುರ್ವೇದಿಕ್ ಹುದ್ದೆಗೆ ಮಾನ್ಯತೆ ಹೊಂದಿರುವ ಬೋರ್ಡ್ ಅಥವಾ ವಿಶ್ವವಿದ್ಯಾನಿಲಯದಿಂದ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಪದವಿ ಭೌತಶಾಸ್ತ್ರ, ರಸಾಯನ ಶಾಸ್ತ್ರ, ಜೀವಶಾಸ್ತ್ರ ತೇರ್ಗಡೆ ಹೊಂದಿರಬೇಕು, ತಾಂತ್ರಿಕ ವಿದ್ಯಾರ್ಹತೆ: ಆಯುರ್ವೇದ ಫಾರ್ಮಸಿ ವಿಷಯದಲ್ಲಿ ಪದವಿ ಅಥವಾ ಸರ್ಕಾರಿ ಸಂಸ್ಥೆ, ಮಾನ್ಯತೆ ಹೊಂದಿದ ಖಾಸಗಿ ಸಂಸ್ಥೆ, ರಾಜ್ಯ ಸರ್ಕಾರದ ಆಯುರ್ವೇದಿಕ್ ರೆಗ್ಯುಲೇಟರಿ ಬೋರ್ಡ್ ಅಥವಾ ಕೌನ್ಸಿಲ್‍ನಿಂದ ನೋಂದಾವಣೆಗೊಂಡ ಯಾವದೇ ವಿಶ್ವವಿದ್ಯಾನಿಲಯದಿಂದ ಕನಿಷ್ಟ 2 ವರ್ಷಗಳ ಆಯುರ್ವೇದಿಕ್ ಫಾರ್ಮಸಿ ಡಿಪ್ಲೋಮಾ ಪದವಿ ಹೊಂದಿರಬೇಕು, ಮಾನ್ಯತೆ ಹೊಂದಿದ ಆರ್ಯುರ್ವೇದಿಕ್ ಔಷಧಾಲಯ, ಆಸ್ಪತ್ರೆ, ಫಾರ್ಮಸಿ, ಕ್ಷೇಮ ಕೇಂದ್ರದಲ್ಲಿ ಕನಿಷ್ಟ 2 ವರ್ಷಗಳ ಕಾಲ ಆಯುರ್ವೇದಿಕ್ ಫಾರ್ಮಾಸಿಸ್ಟ್ ಕರ್ತವ್ಯವನ್ನು ನಿರ್ವಹಿಸರಬೇಕು.

ಫಾರ್ಮಿಸಿಸ್ಟ್ ಕಮ್ ಕ್ಲಾರ್ಕ್ ಹೋಮಿಯೋಪತಿ ಹುದ್ದೆಗೆ ಮಾನ್ಯತೆ ಹೊಂದಿರುವ ಬೋರ್ಡ್ ಅಥವಾ ವಿಶ್ವವಿದ್ಯಾನಿಲಯದಿಂದ ದ್ವಿತೀಯ ಪಿ.ಯು.ಸಿ. ಭೌತಶಾಸ್ತ್ರ, ರಾಸಾಯನ ಶಾಸ್ತ್ರ, ಜೀವಶಾಸ್ತ್ರ ತೇರ್ಗಡೆ ಹೊಂದಿರಬೇಕು. ಮಾನ್ಯತೆ ಹೊಂದಿರುವ ಸಂಸ್ಥೆಯಿಂದ ಹೋಮಿಯೋಪತಿ ಫಾರ್ಮಸಿ ವಿಷಯದಲ್ಲಿ ಕನಿಷ್ಟ 1 ವರ್ಷದ ಡಿಪ್ಲೋಮಾ ಅಥವಾ ಸರ್ಟಿಫಿಕೇಟ್ ಕೋರ್ಸ್ ಹೊಂದಿರಬೇಕು.

ವಯೋಮಿತಿ 2019ರ ಅಕ್ಟೋಬರ್ 13 ಕ್ಕೆ ಅನ್ವಯವಾಗುವಂತೆ ಕನಿಷ್ಟ 18 ರಿಂದ ಗರಿಷ್ಠ 25 ವರ್ಷಗಳು ನಿಯಮಗಳಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಇದೆ. ಅರ್ಜಿ ಶುಲ್ಕ ರೂ. 500. ಎಸ್.ಸಿ, ಎಸ್.ಟಿ, ಪಿಡಬ್ಲ್ಯು.ಡಿ, ಇ.ಡಬ್ಲ್ಯು.ಎಸ್, ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವದಿಲ್ಲ. ಹೆಚ್ಚಿನ ಮಾಹಿತಿಗೆ ಹಾಗೂ ಆನ್‍ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ವೆಬ್‍ಸೈಟ್ hಣಣಠಿs://ಛಿghsbಟಿgಡಿeಛಿಡಿuiಣ.ಚಿಠಿಣoಟಿಟiಟಿe.iಟಿ ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ತಿಳಿಸಿದ್ದಾರೆ.