ಮಡಿಕೇರಿ, ಅ. 13: ಕಲ್ಲುಗುಂಡಿಯ ಶ್ರೀ ಅಮ್ಮ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 2018-19ನೇ ಸಾಲಿನ ಮಹಾಸಭೆ ಸೊಸೈಟಿ ಆವರಣದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಮಂಜುನಾಥ್ ಕಂದಡ್ಕ ಅಧ್ಯಕ್ಷತೆ ವಹಿಸಿದ್ದರು.

ಸಂಘದ ಕಾರ್ಯದರ್ಶಿ ಶಿವಪೆರುಮಾಳ್ ವಾರ್ಷಿಕ ವರದಿ ಮಂಡಿಸಿ, ಸಂಘದ ಬೈಲಾ ಉದ್ದೇಶಗಳು, ದಿನನಿತ್ಯದ ವ್ಯವಹಾರದ ದಾಖಲಾತಿ ವಿವರಗಳು, ಆಡಿಟ್ ವರದಿಯನ್ನು ವಿವರಿಸಿದರು.

ಹಿರಿಯ ಸದಸ್ಯ ಕುಂಞಕಣ್ಣ ಮಾತನಾಡಿ, ಸುಳ್ಯ ತಾಲೂಕಿನಲ್ಲಿ ಪ್ರಾರಂಭವಾದ ಈ ಸೊಸೈಟಿ, ಕಲ್ಲುಗುಂಡಿಯಲ್ಲಿ ಉತ್ತಮ ರೀತಿಯಲ್ಲಿ ನಡೆಯುತ್ತಿದ್ದು, ಎಲ್ಲರೂ ಪಾಲು ಬಂಡವಾಳ ಹೂಡಿ ಸಂಘದ ಶೇರುದಾರರಾಗಬೇಕು ಎಂದರು.

ಸಂಘದ ಅಧ್ಯಕ್ಷ ಮಂಜುನಾಥ್ ಕಂದಡ್ಕ ಮಾತನಾಡಿ, ಸಂಘಕ್ಕೆ ಸರಕಾರದಿಂದ ರೂ. 25 ಲಕ್ಷ ಸಹಾಯ ಧನ ಮಂಜೂರಾತಿ ಆಗಿದ್ದು, ಪತ್ರ ವ್ಯವಹಾರವನ್ನು ನಡೆಸಿ, ಶೀಘ್ರದಲ್ಲಿ ಹಣವನ್ನು ತರಿಸಿ, ಈ ಭಾಗದ ಸದಸ್ಯರಿಗೆ ಸಾಲ ನೀಡಲಿದ್ದೇವೆ ಎಂದರು. ಸಂಘದ ಸದಸ್ಯ ಜ್ಞಾನಶೀಲನ್ ಮಾತನಾಡಿ, ಆಡಳಿತ ಮಂಡಳಿ ನಿರ್ದೇಶಕರು ಹೆಚ್ಚಿನ ಶ್ರಮವಹಿಸಿ, ಬಂಡವಾಳ ಕ್ರೋಢೀಕರಣ ಮಾಡಿ ಉತ್ತಮ ಸಂಸ್ಥೆಯಾಗಿ ಬೆಳೆಸಬೇಕು ಎಂದರು. ವೇದಿಕೆಯಲ್ಲಿ ವಾಣಿ, ಈಶ್ವರ ಉಪಸ್ಥಿತರಿದ್ದರು.