ಗೋಣಿಕೊಪ್ಪ ವರದಿ, ಅ. 13 : ಮಾಯಮುಡಿ ಮಾನಿಲ್ ಅಯ್ಯಪ್ಪ ಮೈದಾನದಲ್ಲಿ ಆಯೋಜಿಸಿದ್ದ ಏಳನೇ ವರ್ಷದ ಮಾನಿಲ್ ಅಯ್ಯಪ್ಪ ಕೊಡವ-ಅಮ್ಮಕೊಡವ ವಾಲಿಬಾಲ್ ಟೂರ್ನಿಯಲ್ಲಿ ಮಂಡುವಂಡ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು. ಅಮ್ಮಂಡ ದ್ವಿತೀಯ, ಮಲ್ಲಂಗಡ ತೃತೀಯ ಸ್ಥಾನ ಪಡೆದುಕೊಂಡಿತು.
ಮಾನಿಲ್ ಅಯ್ಯಪ್ಪ ಸೇವಾ ಸಮಿತಿ, ಮಾನಿಲ್ ಅಯ್ಯಪ್ಪ ಯುವಕ ಸಂಘ ಮತ್ತು ಕೊಡವ ಕೂಟ ಸಹಯೋಗದಲ್ಲಿ ಆಯೋಜಿಸಿದ್ದ ಟೂರ್ನಿಯ ಭಾನುವಾರದ ಅಂತಿಮ ಹಣಾಹಣಿಯಲ್ಲಿ ಮಂಡುವಂಡ ತಂಡವು ಅಮ್ಮಂಡ ವಿರುದ್ದ 25-23, 25-22 ನೇರ ಸೆಟ್ಗಳ ಮೂಲಕ ಗೆದ್ದು ಬೀಗಿತು. ಉಭಯ ತಂಡಗಳಿಂದ ಎರಡು ಸುತ್ತಿನಲ್ಲೂ ಸ್ಪರ್ಧಾತ್ಮಕ ಪೈಪೋಟಿ ಕಂಡು ಬಂತು. ಮೂರನೇ ಸ್ಥಾನಕ್ಕಾಗಿ ನಡೆದ ಸ್ಪರ್ಧೆಯಲ್ಲಿ ಮಲ್ಲಂಗಡ ತಂಡವು ಅಣ್ಣಳಮಾಡ ವಿರುದ್ಧ ಗೆಲವು ಪಡೆಯಿತು. 2ನೇ ಸುತ್ತಿನಲ್ಲಿ ಮಲ್ಲಂಗಡ 21-15 ಅಂಕ ಪಡೆಯಿತು. ನಿರ್ಧರಿತ 3 ನೇ ಸುತ್ತಿನಲ್ಲಿ ಉಭಯ ತಂಡಗಳು ಹೋರಾಟ ನಡೆಸಿದವು. ಮಲ್ಲಂಗಡ 18-15 ಅಂಕಗಳಿಂದ ಜಯಿಸಿ ಮೂರನೇ ತಂಡವಾಗಿ ಹೊರ ಹೊಮ್ಮಿತು. ಮೊದಲ ಸೆಮಿಫೈನಲ್ನಲ್ಲಿ ಅಮ್ಮಂಡ ತಂಡವು ಅಣ್ಣಳಮಾಡ 21-10, 28-26 ಅಂಕಗಳ ಜಯ ಪಡೆಯಿತು. ಮತ್ತೊಂದು ಸೆಮಿಯಲ್ಲಿ ಮಂಡುವಂಡ ತಂಡವು ಮಲ್ಲಂಗಡ ತಂಡದ ವಿರುದ್ಧ 21-10, 21-15 ಅಂಕಗಳ ಮೂಲಕ ಗೆಲವು ಪಡೆಯಿತು.
ವಿವಿಧ ಸ್ಪರ್ಧಾ ವಿಜೇತರು: ಪುರುಷರ ವಾಲಗತ್ತಾಟ್ನಲ್ಲಿ ಕಬ್ಬಚ್ಚೀರ ದರ್ಶನ್ ಮಾಚಯ್ಯ ಪ್ರಥಮ, ಚೋಡುಮಾಡ ಲಿವಿನ್ ಮಂದಪ್ಪ ದ್ವಿತೀಯ, ಕೊಣಿಯಂಡ ಮಂಜು ತೃತೀಯ, ಮಹಿಳೆಯರಲ್ಲಿ ಚೆಪ್ಪುಡೀರ ರಾಧಾ ಅಚ್ಚಯ್ಯ ಪ್ರಥಮ, ಮಲ್ಲಂಗಡ ದಮಯಂತಿ ದ್ವಿತೀಯ, ಅಮ್ಮತ್ತೀರ
(ಮೊದಲ ಪುಟದಿಂದ) ಭುವನೇಶ್ವರಿ ತೃತೀಯ, ಮಕ್ಕಳ ವಿಭಾಗದಲ್ಲಿ ಅಮ್ಮಂಡ ಬೆನಿಶ್ ಪ್ರಥಮ, ಮಾಣಿಪಂಡ ತನ್ವಿ ದ್ವಿತೀಯ ಸ್ಥಾನ ಪಡೆದರು.
ಪುರುಷರಿಗೆ ಆಯೋಜಿಸಿದ್ದ ತೆಂಗಿನಕಾಯಿಗೆ ಗುಂಡು ಹೊಡೆಯುವ ಪೈಪೋಟಿಯಲ್ಲಿ ಆಪಟ್ಟೀರ ಸಿ. ಪ್ರದೀಪ್ ಪ್ರಥಮ, ಕಬ್ಬಚ್ಚೀರ ಶರತ್ ದ್ವಿತೀಯ, ಕೊಣಿಯಂಡ ಸಂಜು ಸೋಮಯ್ಯ ಹಾಗೂ ಮಾಣಿಪಂಡ ಸುತನ್ ತಿಮ್ಮಯ್ಯ ತೃತೀಯ ಬಹುಮಾನವನ್ನು ಜಂಟಿಯಾಗಿ ಪಡೆದುಕೊಂಡರು. ನಾಣಮಂಡ ವೇಣು ಮಾಚಯ್ಯ ತಂಡ ಕೊಡವ ಪಾಟ್ ಕಾರ್ಯಕ್ರಮದ ಮೂಲಕ ರಂಜಿಸಿತು.
ತಾಂತ್ರಿಕ ವರ್ಗದಲ್ಲಿ ಆಪಟ್ಟೀರ ಬೋಪಣ್ಣ, ಚೆಪ್ಪುಡೀರ ದರ್ಶನ್, ಸೋಮಯ್ಯ, ಆಪಟ್ಟೀರ ಪ್ರದೀಪ್, ಸಣ್ಣುವಂಡ ವಿನು ವಿಶ್ವನಾಥ್, ಚೆಪ್ಪುಡೀರ ಪ್ರದೀಪ್, ತೀರ್ಪುಗಾರ ರಾಗಿ ಮಲ್ಲಂಗಡ ಸತ್ಯ, ಚೆರಿಯಪಂಡ ಸುಬ್ಬಯ್ಯ ಕಾರ್ಯನಿರ್ವಹಿಸಿದರು.
ಈ ಸಂದÀರ್ಭ ದಾನಿ ಕಾಳಪಂಡ ಟಿಪ್ಪು ಬಿದ್ದಪ್ಪ, ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಆದೇಂಗಡ ವಿನು ಚಂಗಪ್ಪ, ಲಯನ್ಸ್ ಕ್ಲಬ್ ಅಧ್ಯಕ್ಷ ನಿತಿ ಪೂಣಚ್ಚ, ಅಖಿಲ ಅಮ್ಮಕೊಡವ ಸಮಾಜ ಗೌ. ಅಧ್ಯಕ್ಷ ಬಾನಂಡ ಪ್ರಥ್ವಿ, ಮಾನಿಲ್ ಅಯ್ಯಪ್ಪ ಸೇವಾ ಸಮಿತಿ ಪ್ರಮುಖರಾದ ಸಣ್ಣುವಂಡ ರಮೇಶ್, ಬಲ್ಯಂಡ ರವಿ ಉಪಸ್ಥಿತರಿದ್ದರು. -ಸುದ್ದಿಮನೆ