ಮಡಿಕೇರಿ, ಅ. 13: ಮುಂಜಾನೆ ನಗರದ ಚಿಕ್ಕಪೇಟೆ ಸÀಮೀಪ, ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿಯ ಎದುರು ತನ್ನ ತಾಯಿ ಹಸುವಿನಿಂದ ಬೇರ್ಪಟ್ಟು ನೀರಿನ ಚರಂಡಿಯ ಒಳಗೆ ಬಿದ್ದು ಹೊರಬಾರಲಾಗದ ಪರಿಸ್ಥಿತಿಯಲ್ಲಿದ್ದ ಎಳೆಕರುವನ್ನು ಪೌರಕಾರ್ಮಿಕ ಶ್ರೀರಂಗನಾಥ (ರಂಗಪ್ಪ) ಅವರು ಚರಂಡಿಯಿಂದ ಧೈರ್ಯದಿಂದ ಎತ್ತಿ ಹೊರತಂದು ಕರುವನ್ನು ಉಳಿಸಿದರು.
ನಗರಸಭೆಯ ಹಿರಿಯ ವೀಕ್ಷಕ ನಾಚಪ್ಪ ಮತ್ತು ಓಬಳಿ ಅವರ ಮಾರ್ಗದರ್ಶನದಲ್ಲಿ ಎಳೆಕರುವನ್ನು ರಕ್ಷಿಸಲಾಯಿತು. ರಂಗನಾಥ ಅವರನ್ನು ಸಭೆಯಲ್ಲಿ ರೋಟರಿ ಮಡಿಕೇರಿ ವತಿಯಿಂದ ಪುರಸ್ಕರಿಸಲಾಯಿತು.
ರತನ್ ತಮ್ಮಯ್ಯ ಅಧ್ಯಕ್ಷತೆ ವಹಿಸಿದ್ದರು, ವೃತ್ತಿಸೇವಾ ನಿರ್ದೇಶಕ ಎಂ. ಈಶ್ವರ ಭಟ್ ರಂಗನಾಥರನ್ನು ಪರಿಚಯಿಸಿ ಪುರಸ್ಕಾರ ಪತ್ರವನ್ನು ಓದಿದರು.
ಎಂ.ಜಿ. ಪಾಟ್ಕರ್, ಪಾರ್ಥ ಚೆಂಗಪ್ಪ, ಕಾರ್ಯದರ್ಶಿ ಕೆ.ಸಿ. ಕಾರ್ಯಪ್ಪ, ರೊ. ಸುರೇಶ್ ಚೆಂಗಪ್ಪ, ಇತರ ಸದಸ್ಯರಲ್ಲದೆ ಚೆನ್ನೈಯ ರೋಟರಿ ಸದಸ್ಯರನೇಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.