ಗೋಣಿಕೊಪ್ಪ ವರದಿ, ಅ. 13 : ಕುಡಿದ ಮತ್ತಿನಲ್ಲಿ ನಡೆದ ಜಗಳ ಪತ್ನಿಯ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮಾಯಮುಡಿ ಗ್ರಾಮದಲ್ಲಿ ನಡೆದಿದೆ.
ಅಲ್ಲಿನ ಮಾಚಿಮಾಡ ನಂದಾ ಅವರ ಲೈನ್‍ಮನೆ ವಾಸವಿದ್ದ ಶಿವು ಎಂಬಾತನ ಪತ್ನಿ ರೂಪ (36) ಕೊಲೆಯಾದವರು.
ಆರೋಪಿ ಪತಿ ಶಿವು (40)ನನ್ನು ಗೋಣಿಕೊಪ್ಪ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶನಿವಾರ ರಾತ್ರಿ ಘಟನೆ ನಡೆದಿದ್ದು, ಭಾನುವಾರ ಮುಂಜಾನೆ ವಿಷಯ ತಿಳಿದು ಬಂದಿದೆ. ಶನಿವಾರ ರಾತ್ರಿ ಕುಡಿದು ಜಗಳವಾಡಿಕೊಂಡು, ದೊಣ್ಣೆಯಿಂದ ರೂಪ ಅವರ ತಲೆಗೆ ಬಿದ್ದ ಬಲವಾದ ಪೆಟ್ಟಿನಿಂದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
-ಸುದ್ದಿಮನೆ