ಚೆಟ್ಟಳ್ಳಿ, ಅ. 13: ಆಟೋ, ಬೈಕ್ ಹಾಗೂ ವಾಹನ ಸವಾರರು ಕಾನೂನು ಪಾಲನೆ ಮಾಡದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳುವದಾಗಿ ಸಿದ್ದಾಪುರ ಠಾಣಾಧಿಕಾರಿ ದಯಾನಂದ್ ಖಡಕ್ ಎಚ್ಚರಿಕೆ ನೀಡಿದ್ದಾರೆ
ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಆಟೋ ಹಾಗೂ ವಾಹನ ಚಾಲಕರಿಗೆ ಕಾನೂನು ಅರಿವು ಹಾಗೂ ನಿಯಮ ಪಾಲನೆಯ ಬಗ್ಗೆ ಮಾಹಿತಿ ನೀಡಿ ಮಾತನಾಡಿದ ಅವರು ಪ್ರತಿಯೊಬ್ಬರು ನಿಯಮಗಳನ್ನು ಪಾಲನೆ ಮಾಡಿ ಸುರಕ್ಷಿತ ಚಾಲನೆ ಹಾಗೂ ಮುಂಜಾಗ್ರತಾ ಕ್ರಮ ವಹಿಸಬೇಕೆಂದು ಹೇಳಿದರು.
ಸಭೆಯಲ್ಲಿ ಜೀಪು, ಆಟೋ ಹಾಗೂ ವಾಹನ ಸವಾರರು ಹಾಜರಿದ್ದರು.
ಸಿದ್ದಾಪುರ ಪಟ್ಟಣದಲ್ಲಿ ಠಾಣಾಧಿಕಾರಿ ದಯಾನಂದ್ ಹಾಗೂ ಸಿಬ್ಬಂದಿ ಕೆಲ ಗಂಟೆಗಳ ಕಾಲ ವಾಹನಗಳನ್ನು ತಪಾಸಣೆ ಮಾಡಿ ನಿಯಮ ಉಲ್ಲಂಘಿಸಿದ ಸವಾರರಿಂದ ದಂಡ ವಸೂಲಿ ಮಾಡಿದರು.