ಗುಡ್ಡೆಹೊಸೂರು, ಅ. 12: ಇಲ್ಲಿಗೆ ಸಮೀಪದ ಬಾಳುಗೋಡು ಗ್ರಾಮದ ನಿವಾಸಿ ಸುಗು ಎಂಬವರು 2.30 ಎಕರೆ ಪ್ರದೇಶದಲ್ಲಿ ಮುಸುಕಿನ ಜೋಳ ಬೆಳೆದಿದ್ದು, ಒಂಟಿ ಸಲಗ ದಾಳಿ ಮಾಡಿ ಬೆಳೆಯನ್ನು ನಾಶಪಡಿಸಿದೆ ಎಂದು ಸುಗು ದೂರಿಕೊಂಡಿದ್ದಾರೆ. ಅಲ್ಲಿನ ನಿವಾಸಿ ಮಜಿದ್ ಎಂಬವರ ಜೋಳದ ಬೆಳೆ ಸಂಪೂರ್ಣ ಆನೆ ಪಾಲಾಗಿದೆ. ಈ ಸಂಬಂಧ ಅರಣ್ಯ ಇಲಾಖೆಯವರಿಗೆ ದೂರು ನೀಡಲಾಗಿದೆ.