ಪೆರಾಜೆ, ಅ. 13: ಬಿ.ಜೆ.ಪಿ ಗ್ರಾಮ ಸಮಿತಿ ಪೆರಾಜೆಯ ಅಧ್ಯಕ್ಷರಾಗಿ ನೂತನ ಶಕ್ತಿ ಕೇಂದ್ರದ ಅಧ್ಯಕ್ಷ ನಂಜಪ್ಪ ನಿಡ್ಯಮಲೆ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಧನಂಜಯ ಕೋಡಿ ಆಯ್ಕೆಯಾದರು. ಪೆರಾಜೆ ಪಂಚಾಯಿತಿ ಸಭಾಭವನದಲ್ಲಿ ಮೋನಪ್ಪ ಮಾಸ್ಟರ್ ಕುಂಬಳಚೇರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪಕ್ಷದ ಮಾಸಿಕ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು.

ಸುಮಾರು 6 ವರ್ಷಗಳಿಂದ ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಮೋನಪ್ಪ ಕುಂಬಳಚೇರಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿದ್ದ ಪ್ರಸನ್ನ ನೆಕ್ಕಿಲ ಅವರು ತಮ್ಮ ಅಧಿಕಾರವನ್ನು ನಂಜಪ್ಪ ನಿಡ್ಯಮಲೆ ಮತ್ತು ಧನಂಜಯ ಕೋಡಿ ಇವರುಗಳಿಗೆ ಹಸ್ತಾಂತರ ಮಾಡಿದರು. ಈ ಸಂದರ್ಭ ಮಡಿಕೇರಿ ತಾಲೂಕು ಪಂಚಾಯಿತಿ ಸದಸ್ಯ ನಾಗೇಶ್ ಕುಂದಲ್ಪಾಡಿ ಸೇರಿದಂತೆ ಚುನಾಯಿತ ಜನಪ್ರತಿನಿಧಿಗಳು, ಕಾರ್ಯಕರ್ತರು, ಇದ್ದರು.