ಮಡಿಕೇರಿ, ಅ. 13: ಕೊಡಗು ಪತ್ರಿಕಾ ಭವನ ಟ್ರಸ್ಟ್ನ ವಾರ್ಷಿ ಕೋತ್ಸವ ಮತ್ತು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ 150ನೇ ಜಯಂತಿಯ ಪ್ರಯುಕ್ತ ಶಿಕ್ಷಕರಿಗೆ ಪತ್ರಿಕಾ ಭವನದಲ್ಲಿ ದೇಶ ಭಕ್ತಿಗೀತೆ ಗಾಯನ ಸ್ಪರ್ಧೆ ಆಯೋಜಿಸಲಾಗಿತ್ತು. ನಗರ ವ್ಯಾಪ್ತಿಯ ಎಂಟು ತಂಡಗಳು ಪಾಲ್ಗೊಂಡಿದ್ದವು.
ಕೊಡಗು ಪತ್ರಿಕಾ ಭವನ ಟ್ರಸ್ಟ್ನ ಸ್ಥಾಪಕಾಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಶಿಕ್ಷಕ ಸಮೂಹದಲ್ಲಿನ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಬೇಕು ಎನ್ನುವ ಚಿಂತನೆಯಂತೆ ದೇಶ ಭಕ್ತಿಗೀತೆ ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು. ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಎಸ್.ಜಿ. ಉಮೇಶ್ ಮಾತನಾಡಿದರು.
ಟ್ರಸ್ಟಿ ಹಾಗೂ ಹಿರಿಯ ಪತ್ರಕರ್ತ ಕೆ. ತಿಮ್ಮಪ್ಪ ಅವರು, ಪತ್ರಿಕಾ ಭವನ ಟ್ರಸ್ಟ್ ವಾರ್ಷಿ ಕೋತ್ಸವ ತಾ.15 ರಂದು ಬೆಳಗ್ಗೆ ಪತ್ರಿಕಾ ಭವನದಲ್ಲಿ ನಡೆಯ ಲಿದ್ದು, ಆ ಸಮಾ ರಂಭದಲ್ಲಿ ದೇಶ ಭಕ್ತಿಗೀತೆ ಗಾಯನ ಸ್ಪರ್ಧೆಯ ವಿಜೇತರಿಗೆ ಬಹು ಮಾನ ಮತ್ತು ಸ್ಪರ್ಧಿಸಿದ ಎಲ್ಲ ಶಿಕ್ಷಕರಿಗೂ ಕಿರು ಕಾಣಿಕೆಯನ್ನು ಪ್ರದಾನ ಮಾಡ ಲಾಗುತ್ತದೆ ಎಂದು ತಿಳಿಸಿದರು.