ಮಡಿಕೇರಿ, ಅ. 12: ಶ್ರೀ ಮುತ್ತಪ್ಪ ಕೊಡವ ಕೇರಿ ಆಶ್ರಯದಲ್ಲಿ ತಾ. 29 ರಂದು ಮಡಿಕೇರಿ ಕೊಡವ ಸಮಾಜದಲ್ಲಿ 6ನೇ ಕೊಡವ ಅಂತರ್‍ಕೇರಿ ಮೇಳ ಆಯೋಜಿಸಲಾಗಿದೆ. ಅಂದು ಬೆಳಿಗ್ಗೆ 9 ಗಂಟೆಯಿಂದ ಕೊಡವ ಕೇರಿಗಳ ನಡುವೆ ಸಾಂಸ್ಕøತಿಕ ಸ್ಪರ್ಧೆ ನಡೆಯಲಿದೆ ಎಂದು ಮುತ್ತಪ್ಪ ಕೊಡವ ಕೇರಿ ಅಧ್ಯಕ್ಷ ಮುಂಡಂಡ ಕೆ. ಗಾಂಧಿ ಹಾಗೂ ಪ್ರಧಾನ ಕಾರ್ಯದರ್ಶಿ ಕನ್ನಂಡ ಸುಧಾ ಬೊಳ್ಳಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶ್ರೀ ಮುತ್ತಪ್ಪ ಕೊಡವ ಕೇರಿ, ಶ್ರೀ ಭಗಂಡೇಶ್ವರ ಕೊಡವ ಅಭಿವೃದ್ಧಿ ಸಂಘ, ಶ್ರೀ ದೇಚೂರ್ ಕೊಡವ ಕೇರಿ, ಶ್ರೀ ಸುದರ್ಶನ ಕೊಡವ ಕೇರಿ, ಶ್ರೀ ಕಾವೇರಿ ಕೊಡವ ಕೇರಿ, ಶ್ರೀ ರಾಣಿಪೇಟೆ ಕೊಡವ ಕೂಟ, ಶ್ರೀ ವಿನಾಯಕ ಕೊಡವ ಕೇರಿ, ಶ್ರೀ ಸುಬ್ರಹ್ಮಣ್ಯ ಕೊಡವ ಕೇರಿ, ಶ್ರೀ ಗಣಪತಿ ಕೊಡವ ಕೇರಿ, ಶ್ರೀ ಇಗ್ಗುತ್ತಪ್ಪ ಕೊಡವ ಕೇರಿ, ಶ್ರೀ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕೊಡವ ಕೇರಿ, ಶ್ರೀ ಭಗವತಿ ಕೊಡವ ಕೇರಿ ನಡುವೆ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು ಅ.20 ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು.

ಪುರುಷರಿಗೆ ಬೊಳಕಾಟ್, ಕೋಲಾಟ್ (8 ನಿಮಿಷ), ಪರೆಯಕಳಿ (5 ನಿಮಿಷ), ಬಾಳೋಪಾಟ್ (5 ನಿಮಿಷ), ಮಹಿಳೆಯರಿಗೆ ಉಮ್ಮತ್ತಾಟ್ (8 ನಿಮಿಷ), ಮಕ್ಕಳಿಗೆ ಕಪ್ಪೆಯಾಟ್ (5 ನಿಮಿಷ), ಪುರುಷರು, ಮಹಿಳೆಯರು ಹಾಗೂ ಮಕ್ಕಳಿಗೆ ಪ್ರತ್ಯೇಕ ವಿಭಾಗದಲ್ಲಿ ವಾಲಗತಾಟ್ (8 ನಿಮಿಷ), ಸಮ್ಮಂಧ ಅಡ್‍ಕುವೊ (5 ನಿಮಿಷ), ತಾಲಿಪಾಟ್ (5 ನಿಮಿಷ), ಕೊಡವ ಪಾಟ್ (3 ನಿಮಿಷ) ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು ಕೇರಿ ಅಧ್ಯಕ್ಷರ ಮೂಲಕ ಹೆಸರು ನೋಂದಾಯಿಸಿಕೊಳ್ಳಬೇಕು. ಕೋಲಾಟ್, ಬೊಳಕಾಟ್, ಉಮ್ಮತ್ತಾಟ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ತಂಡದಲ್ಲಿ 8 ರಿಂದ 12 ಜನ ಇರಬಹುದು. ಕೇರಿ ಸದಸ್ಯರಿಗೆ ಮಾತ್ರ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಕನ್ನಂಡ ಸುಧಾ ಬೊಳ್ಳಪ್ಪ (9980968587) ಅವರನ್ನು ಸಂಪರ್ಕಿಸಬಹುದು.