ಸಿದ್ದಾಪುರ, ಅ. 13: ಇತ್ತೀಚೆಗೆ ಜಿಲ್ಲೆಯಲ್ಲಿ ಸುರಿದ ಮಹಾಮಳೆಯಿಂದ ಕಾವೇರಿ ನದಿ ದಡದಲ್ಲಿರುವ ಗುಹ್ಯ ಗ್ರಾಮದ ಹಲವು ಮನೆಗಳು ಹಾನಿಯಾಗಿ ಸಂಕಷ್ಟಕ್ಕೊಳಗಾಗಿರುವ ಕುಟುಂಬಗಳ ಪುನರ್ವಸತಿ ನಿಧಿಗೆ ಸಿದ್ದಾಪುರ ವಲಯದ ಎಸ್ ವೈ ಎಸ್ ಸಂಘಟನೆಯಿಂದ ಧನಸಹಾಯವನ್ನು ಮಸೀದಿಯ ಖತೀಬ್ ಶಿಹಾಬ್ ಲತಿಪಿ ಅವರ ಮೂಲಕ ನೀಡಲಾಯಿತು.

ಈ ಸಂದರ್ಭ ಸಂಘಟನೆಯ ಪ್ರಮುಖರಾದ ಕೆ.ಎಂ. ಸಯ್ಯದ್ ಭಾವ, ಉಮ್ಮರ್, ಅಬ್ದುಲ್ಲಾ ಹಂಸ ಸೇರಿದಂತೆ ಮತ್ತಿತರರು ಇದ್ದರು.