*ಗೋಣಿಕೊಪ್ಪಲು, ಅ. 11: ಪರಿಸರ ಜಾಗೃತಿ ಮೂಡಿಸುವ ನೃತ್ಯಗಳ ಮೂಲಕ ಪೆÇನ್ನಂಪೇಟೆ ನಿಸರ್ಗ ಕಲಾರಂಗ ತಂಡ ಗಮನ ಸೆಳೆಯಿತು.

ಶ್ರೀ ಕಾವೇರಿ ಕಲಾವೇದಿಕೆಯಲ್ಲಿ ಆಯುಧ ಪೂಜೆಯ ಪ್ರಯುಕ್ತ ನಡೆದ ಸ್ಥಳೀಯ ಕಾರ್ಯಕ್ರಮದಲ್ಲಿ ನಿಸರ್ಗ ಕಲಾ ತಂಡದ ಸದಸ್ಯರು ಪರಿಸರ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ಬಗ್ಗೆ ನೃತ್ಯದ ಮೂಲಕ ಅಭಿನಯಿಸಿದರು. ಇದರೊಂದಿಗೆ ಜಾನಪದ, ಚಿತ್ರಗೀತೆಗಳಿಗೂ ಹೆಜ್ಜೆ ಹಾಕಿದರು.

ದೀಕ್ಷಿತ್ ತಂಡದಿಂದ ಸಿಡಿ ನೈಟ್ಸ್, ಗಿಟಾರ್ ವಾದನ ಹಾಗೂ ಗಾಯನ ಕಾರ್ಯಕ್ರಮ ನಡೆಯಿತು. ನಂತರ ಸೈಕ್ಲೋನ್ ನೃತ್ಯ ತಂಡದಿಂದ ವೈವಿದ್ಯಮಯ ನೃತ್ಯಗಳು ಪ್ರೇಕ್ಷಕರಿಗೆ ಮನರಂಜನೆ ನೀಡಿತು. ಸೈಕ್ಲೋನ್ ತಂಡದ ನಾಯಕ ರಮೇಶ್ ಹಾಗೂ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ ನೃತ್ಯ ತರಬೇತುದಾರ ಶಶಿ ನೃತ್ಯ ತಂಡಗಳ ಪ್ರದರ್ಶನ ಆಕರ್ಷಕವಾಗಿತ್ತು. ಸುಮಾರು ಮೂರುವರೆ ಗಂಟೆಗಳ ಕಾಲ ನಡೆದ ಸಾಂಸ್ಕೃತಿಕ ಸಂಜೆಯಲ್ಲಿ ಜನರ ಮನಸೆಳೆಯಲು ಕಾರ್ಯಕ್ರಮಗಳು ಮೂಡಿಬಂತು.

ವಿಜಯ ದಶಮಿಯಂದು ಕನ್ನಡ ಕೋಗಿಲೆ ಖ್ಯಾತಿಯ ಸರಿಗಮಪ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ ಪುರುಷೋತ್ತಮ್ ಹಾಗೂ ರಿಷಿ ಇವರುಗಳ ಸಂಗೀತ ಸಂಜೆ ನಡೆಯಿತು.