ವೀರಾಜಪೇಟೆ, ಅ. 11 : ಅಕ್ರಮವಾಗಿ ಹೆಬ್ಬಲಸು ಮರದ ದಿಮ್ಮಿಗಳನ್ನು ಕಡಿದು ಸಾಗಾಟ ಮಾಡಲು ಯತ್ನಿಸಿದ ಆರೋಪಿಯನ್ನು ವೀರಾಜಪೇಟೆ ಸಿ.ಐ.ಡಿ. ಪೊಲೀಸ್ ಅರಣ್ಯ ಸಂಚಾರಿ ದಳ ಬಂಧಿಸಿದೆ.
ವೀರಾಜಪೇಟೆ ತಾಲೂಕುವಿನ ಹಾಲುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಡಂಗೇರಿ ಗ್ರಾಮದ ಎಲಿಯಂಗಾಡು ವಿನಲ್ಲಿ ಅಕ್ರಮವಾಗಿ ಹೆಬ್ಬಲಸು ಮರಗಳನ್ನು ಕಡಿದು ನಾಟ ಮಾಡಿ ಸಾಗಾಟದ ಖಚಿತ ಮಾಹಿತಿಯ ಮೇರೆಗೆ ಮುಂಜಾನೆ ಹೊತ್ತಿನಲ್ಲಿ ದಾಳಿ ನಡೆಸಿ ರೂ. 1,80,000 ಮೌಲ್ಯದ ಮರದ ದಿಮ್ಮಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಲಾರಿ ಮೌಲ್ಯ ರೂ. 10 ಲಕ್ಷ ಸೇರಿ ಒಟ್ಟು 11,80,000 ಮೌಲ್ಯದಾಗಿದೆ. ಅಕ್ರಮ ದಾಸ್ತಾನು ಇರಿಸಿದ ಎಲಿಯಂಗಾಡು ಗ್ರಾಮ ನಿವಾಸಿ ಸಲೀಂ (37)ನನ್ನು ಬಂಧಿಸಿದ್ದಾರೆ.
ವೀರಾಜಪೇಟೆ ಸಿ.ಐ.ಡಿ. ಪೊಲೀಸ್ ಅರಣ್ಯ ಸಂಚಾರಿ ದಳ ಸಿಬ್ಬಂದಿಗಳು, ಮಡಿಕೇರಿ ಸಿ.ಐ.ಡಿ. ಅರಣ್ಯ ಘಟಕದ ವರಿಷ್ಠಾಧಿಕಾರಿ ಸುರೇಶ್ ಬಾಬು ಅವರ ಮಾರ್ಗದರ್ಶನದಲ್ಲಿ ಸಿಬ್ಬಂದಿಗಳಾದ ಕೆ.ಬಿ. ಸೋಮಣ್ಣ ಟಿ.ಪಿ. ಮಂಜುನಾಥ್, ಎಂ.ಬಿ. ಗಣೇಶ್, ಪಿ.ಬಿ. ಮೊಣ್ಣಪ್ಪ, ಸಿ.ಎಂ. ರೇವಪ್ಪ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.