ವೀರಾಜಪೇಟೆ, ಅ. 11: ಬಾಳುಗೋಡುವಿನಲ್ಲಿ ಕೊಡವ ಸಮಾಜ ಒಕ್ಕೂಟದಿಂದ ಕೊಡವ ಸಮಾಜಗಳ ನಡುವೆ ನಡೆಯುತ್ತಿರುವ ನಾಕೌಟ್ ಹಾಕಿ ಪಂದ್ಯಾಟದಲ್ಲಿ ಮೈಸೂರು, ವೀರಾಜಪೇಟೆ, ನಾಪೋಕ್ಲು, ಮೂರ್ನಾಡು ಸಮಾಜಗಳು ಉಪಾಂತ್ಯಕ್ಕೆ ತಲುಪಿದೆ. ತಾ.12 ರಂದು (ಇಂದು) ಅಪರಾಹ್ನ 1 ಗಂಟೆಗೆ ಪಂದ್ಯಾಟ ನಡೆಯಲಿದೆ.
ಕುಶಾಲನಗರ ಕೊಡವ ಸಮಾಜ ತಂಡ ಬಾರದ ಕಾರಣ ನಾಪೋಕ್ಲು ತಂಡಕ್ಕೆ ವಾಕ್‍ಓವರ್ ಲಭಿಸಿತು. ಗೋಣಿಕೊಪ್ಪ ತಂಡ ಬಾರದ ಕಾರಣ ಮೂರ್ನಾಡು ತಂಡ ವಿಜಯಿಯಾಯಿತು. ಮ್ಯೆಸೂರು ತಂಡ 3-0 ಗೋಲುಗಳಿಂದ ಆರಾಯಿರ ತಂಡವನ್ನು ಮಣಿಸಿತು. ಮಡಿಕೇರಿ ತಂಡ 4-1 ಗೋಲುಗಳಿಂದ ಕುಟ್ಟ ತಂಡವನ್ನು ಪರಾಭವ ಗೊಳಿಸಿತು. ವಿರಾಜಪೇಟೆ ತಂಡ 3-1 ಗೋಲುಗಳಿಂದ ಮಡಿಕೇರಿ ತಂಡವನ್ನು ಸೋಲಿಸಿತು. ನಾಪೋಕ್ಲು ತಂಡ 2-1 ಗೋಲುಗಳಿಂದ ಬಲಿಷ್ಠ ಬೆಂಗಳೂರು ತಂಡವನ್ನು ಮಣಿಸಿ ಉಪಾಂತ್ಯಕ್ಕೆ ಪ್ರವೇಶ ಪಡೆದುಕೊಂಡಿತು.
ತೀರ್ಪುಗಾರರಾಗಿ ಕೋಡಿಮಣಿಯಂಡ ಗಣಪತಿ, ಚ್ಯೆಯ್ಯಂಡ ಅಪ್ಪಚ್ಚು, ಬೊಳ್ಳಚಂಡ ನಾಣಯ್ಯ, ಚೋಯಮಾಡಂಡ ಚಂಗಪ್ಪ, ಕರವಂಡ ಅಪ್ಪಣ್ಣ, ಕುಪ್ಪಂಡ ದಿಲನ್, ಚಂದಪಂಡ ಆಕಾಶ್, ಕೊಕ್ಕಂಡ ರೋಷನ್, ತಾಂತ್ರಿಕ ಸಮಿತಿ ನೆಲ್ಲಮಕ್ಕಡ ಪವನ್, ತಾಂತ್ರಿಕ ನಿರ್ದೇಶಕರಾಗಿ ಕಾಟ್‍ಮಣಿಯಂಡ ಉಮೇಶ್ ಕಾರ್ಯ ನಿರ್ವಹಿಸಿದರು. ಮಾಳೇಟಿರ ಶ್ರೀನಿವಾಸ್ ಪಂದ್ಯಾಟದ ವೀಕ್ಷಕ ವಿವರಣೆ ನೀಡಿದರು.