ಸುಂಟಿಕೊಪ್ಪ, ಅ.9: ಬೆಂಗಳೂರಿನಿಂದ ಮಡಿಕೇರಿಗೆ ತೆರಳುತ್ತಿದ್ದ ಪ್ರವಾಸಿಗರ ಕಾರು ಮಂಗಳವಾರ ಮಧ್ಯಾಹ್ನ ಸುಮಾರು 2 ಗಂಟೆಗೆ ಸುಂಟಿಕೊಪ್ಪ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ (ಮದ್ರಸ ಸಮೀಪ) ನಿಲ್ಲಿಸಿದ್ದ ಎರಡು ಕಾರುಗಳಿಗೆ ಡಿಕ್ಕಿಯಾಗಿದೆ. ಪ್ರವಾಸಿ ಕಾರು ಅಪ್ಪಳಿಸಿದ ರಭಸಕ್ಕೆ ಕಾರೊಂದು ಚರಂಡಿ ಒಳಗೆ ನುಗ್ಗಿದೆ. ನಿಲ್ಲಿಸಿದ್ದ ಕಾರುಗಳಲ್ಲಿ ಯಾರೂ ಇರದಿದ್ದ ಕಾರಣ ಹೆಚ್ಚಿನ ಅನಾಹುತ ತಪ್ಪಿದೆ. ಪ್ರವಾಸಿ ಕಾರಿನಲ್ಲಿದ್ದವರು ಕೂಡ ಅಪಾಯದಿಂದ ಪಾರಾಗಿದ್ದಾರೆ.