ಸುಂಟಿಕೊಪ್ಪ, ಅ. 9: ಸುಂಟಿ ಕೊಪ್ಪ ಆಯುಧಪೂಜಾ ಕಾರ್ಯಕ್ರಮ ಗಳಿಗೆ ಸರಕಾರದ ವತಿಯಿಂದ ರೂ. 5 ಲಕ್ಷ ಅನುದಾನ ಒದಗಿಸುವ ಕುರಿತು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಭರವಸೆ ವ್ಯಕ್ತಪಡಿಸಿದ್ದಾರೆ.
ವಿದ್ಯುತ್ ದೀಪಗಳಿಂದ ಅಲಂಕೃತ ವಾಹನ ಚಾಲಕರ ಸಂಘದ ವೇದಿಕೆಯಲ್ಲಿ ಸೋಮವಾರ ಸಂಜೆ 49ನೇ ಆಯುಧಪೂಜಾ ಸಮಾ ರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸುಂಟಿಕೊಪ್ಪ ಅಭಿವೃದ್ಧಿಯ ಕುರಿತು ಸಾಕಷ್ಟು ಚಿಂತನೆ ಸಲ್ಲಿಸಿದ್ದು ಈಗಾಗಲೇ ರೂ. 10 ಕೋಟಿ ಅನುದಾನವನ್ನು ಪಂಚಾಯಿತಿ ಗೆ ನೀಡಲಾಗಿದೆ. ರಸ್ತೆ ಅಗಲೀಕರಣದ ಹಿನ್ನೆಲೆಯಲ್ಲಿ ಮಾರುಕಟ್ಟೆ ಸ್ಥಳಾಂತರ ಹೊಸ ಮಾರುಕಟ್ಟೆಯ ನಿರ್ಮಾಣ ವಿಳಂಬವಾಗಿದೆ. ಮಲೆನಾಡು ಅಭಿವೃದ್ಧಿ ಯೋಜನೆಯಲ್ಲಿ ರೂ. 50 ಲಕ್ಷ ಅನುದಾನವನ್ನು ಒದಗಿಸಲಾಗು ವದು ಎಂದು ಅವರು ಹೇಳಿದರು. ಮುಖ್ಯ ಅತಿಥಿಗಳಲ್ಲಿ ಒಬ್ಬರಾಗಿದ್ದ ಹಾಸನ ಜಿಲ್ಲಾ ಗ್ರಾಹಕರ ವೇದಿಕೆಯ ಪರಿಹಾರ ಆಯೋಗದ ಅಧ್ಯಕ್ಷ ಎ.ಲೋಕೇಶ್ ಕುಮಾರ್ ಮಾತನಾಡಿ ಸುಂಟಿಕೊಪ್ಪ ಆಯುಧಪೂಜಾ ಸಂಭ್ರಮವು ತನ್ನ ಗತವೈಭವವನ್ನು ಮರಳಿ ಪಡೆಯಬೇಕೆಂದು ಆಶಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಪಿ.ಚಂದ್ರಕಲಾ ಮಾತನಾಡಿ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೇಡ ನಾವೆಲ್ಲ್ಲಾ ಒಂದಾಗಿ ಕೆಲಸ ಮಾಡೋಣ ಸುಂಟಿಕೊಪ್ಪ ಒಂದು ಮಾದರಿ ಪಟ್ಟಣವಾಗಿ ಬೆಳೆಯಬೇಕು ಈಗಾಗಲೇ ಸುಂಟಿಕೊಪ್ಪ ವಿಸ್ತರಣೆ ವಿಚಾರದಲ್ಲಿ 9 ಎಕ್ರೆ ಜಾಗವನ್ನು ಗುರುತಿಸಲಾಗಿದೆ. ಇದರ ಬಗ್ಗೆ ಶಾಸಕರು ಕೇಂದ್ರ ಮತ್ತು ರಾಜ್ಯದಿಂದ ವಿಶೇಷ ಅನುದಾನ ತರುವಲ್ಲಿ ಶ್ರಮಿಸಬೇಕು ಎಂದರು. ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎಂ.ಲತೀಫ್ ಮಾತನಾಡಿ ಸುಂಟಿಕೊಪ್ಪದಲ್ಲಿ ಮತ್ತೆ ಅದ್ಧೂರಿ ಮತ್ತು ವರ್ಣರಂಜಿತ ಆಯುಧ ಪೂಜಾ ಸಮಾರಂಭ ನೆಡೆಯು ವಂತಾಗಬೇಕೆಂದು ಆಶಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ.ಭಾರತೀಶ್ ಮಾತನಾಡಿ ಮುಂದಿನ ವರ್ಷದ 50 ವಾರ್ಷಿಕ ಸಂಭ್ರಮಕ್ಕೆ ಈಗಿನಿಂದಲೇ ಸಿದ್ಧತೆಗಳು ಆರಂಭವಾಗಲಿ ಎಂದರು. ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್, ಮತ್ತು ಜಿ.ಪಂ. ಮಾಜಿ ಸದಸ್ಯ ವಿ.ಪಿ. ಶಶಿಧರ್ ಮಾತನಾಡಿದರು. ಗ್ರಾ.ಪಂ. ಮಾಜಿ ಅಧ್ಯಕ್ಷ ಮತ್ತು ಜಿಲ್ಲಾ ವಾಹನ ಚಾಲಕರ ಸಂಘದ ಅಧ್ಯಕ್ಷ ಎಂ.ಎ.ಉಸ್ಮಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಮಾರಂಭದ ವೇದಿಕೆಯಲ್ಲಿ ಜಿ.ಪಂ. ಸದಸ್ಯೆ ಕುಮುದಾ ಧರ್ಮಪ್ಪ, ಅನೂಪ್ ಮಾದಪ್ಪ, ಕುಶಾಲನಗರ ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಮೊೈದು, ಉದ್ಯಮಿ ಟಿ.ಆರ್. ಮುನಿಯಪ್ಪನ್, ವಿಲಿಯಂ ಮೇನೆಜೇಸ್, ಕೆ.ಪಿ. ಜಗನ್ನಾಥ್, ಮಾಗಲು ವಸಂತ, ಚಾಲಕರ ಸಂಘದ ಅಧ್ಯಕ್ಷ ಬಿ.ಎಂ. ಪೂವಪ್ಪ, ಗೌರವಾಧ್ಯಕ್ಷ ಎ.ಹಂಸ (ಅಚ್ಚುಪ್ಪ), ಉಪಾಧ್ಯಕ್ಷ ಬಿ.ಎ.ಕೃಷ್ಣಪ್ಪ, ಕಾರ್ಯದರ್ಶಿ ದೇವಯ್ಯ, ಖಜಾಂಜಿ ಕೆ.ಎಸ್.ಸುರೇಶ್, ಸಹಕಾರ್ಯದರ್ಶಿ ವಿ.ಆರ್.ಸುರೇಶ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.
49ನೇ ಆಯುಧಪೂಜಾ ಸಮಾರಂಭದ ಸರಳ ಆಯುಧ ಪೂಜಾ ಕಾರ್ಯಕ್ರಮದಲ್ಲಿ ಕುಶಾಲನಗರದ ಮಂಜು ಭಾರ್ಗವಿ ತಂಡ ಹಾಗೂ ಸ್ಥಳೀಯ ಕಲಾವಿದರ ನೃತ್ಯ ಸಾಂಸ್ಕøತಿಕ ಕಾರ್ಯಕ್ರಮ ಮಕ್ಕಳ ಕಲಾ ಪ್ರತಿಭೆಗಳ ಜನಮನ ಸೂರೆಗೊಳಿಸಿತು.
ವೇದಿಕೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳಾದ ಮಡಿಕೇರಿ ವೃತ್ತ ನಿರೀಕ್ಷಕರಾದ ಅನೂಪ್ ಮಾದಪ್ಪ, ಜಿ.ಪಂ.ಸದಸ್ಯೆ ಕೆ.ಪಿ.ಚಂದ್ರಕಲಾ, ನಿವೃತ್ತ ಯೋಧ ವಿಲಿಯಂ ಮೇನೆಜೇಸ್, ಕೆ.ಪಿ. ಜಗನ್ನಾಥ್, ನಿವೃತ್ತ ಯೋಧ ಮಾಗಲು ವಸಂತ ಅವರನ್ನು ವೇದಿಕೆಯಲ್ಲಿದ್ದ ಅತಿಥಿಗಳು ಫಲ ತಾಂಬೂಲ ನೀಡಿ ಗೌರವಿಸಿದರು. ಜಿಲ್ಲಾ ವಾಹನ ಚಾಲಕರ ಸಂಘದ ಅಧ್ಯಕ್ಷ ಎಂ.ಎ. ಉಸ್ಮಾನ್ ಸ್ವಾಗತಿಸಿ, ಮಂಜುನಾಥ್ ನಿರೂಪಿಸಿ ವಂದಿಸಿದರು.