ವೀರಾಜಪೇಟೆ, ಅ. 9: ಸರ್ಕಾರಿ ಆಸ್ಪತ್ರೆಯಲ್ಲಿ ಹೈಟೆಕ್ ಸೌಕರ್ಯಗಳಿರುದರಿಂದ ಸಾರ್ವಜನಿಕರಲ್ಲಿ ಆತ್ಮವಿಶ್ವಾಸ ಹೆಚ್ಚಿದೆ ಎಂದು ವೀರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಹೇಳಿದರು. ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೈಟೆಕ್ ಐ.ಸಿ.ಯು, ಮೋಡ್‍ಲರ್ ಓ.ಟಿ, ಮತ್ತು ಮಕ್ಕಳ ಪುನಶ್ಚೇತನಾ ಕೇಂದ್ರವನವನ್ನು ಉದ್ಘಾಟಿಸಿ ಮಾತನಾಡಿ 240 ಹಾಸಿಗೆಯ ಆಸ್ಪತ್ರೆಯಲ್ಲಿ ಪ್ರತಿದಿನ 500 ರಿಂದ 600 ಒಳ ಹಾಗೂ ಹೊರ ರೋಗಿಗಳನ್ನು ಪರೀಕ್ಷಿಸಲಾಗುವದು. ಸುಸಜ್ಜಿತ ಡಯಾಲಿಸಿಸ್ ಕೇಂದ್ರ ಇದ್ದು ಪ್ರತಿದಿನ 36 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರುಗಳ ಕೊರತೆ ಇದ್ದು ಶೀಘ್ರದಲ್ಲಿಯೇ ಭರ್ತಿ ಮಾಡಲಾಗುವದು. ಬಿಪಿಎಲ್ ಕಾರ್ಡ್ ಹೊಂದಿರುವ ಫಲಾನುಭವಿಗಳೀಗೆ ಕೇಂದ್ರ ಸರ್ಕಾರದ ದಂತ ಭಾಗ್ಯ ಯೋಜನಾ ಶಿಬಿರದಲ್ಲಿ ಕೃತಕ ಹಲ್ಲು ಜೋಡಣಾ ಕಾರ್ಯಕ್ರಮವನ್ನು ನಡೆಸಲಾಗುವದು ಎಂದು ಹೇಳಿದರು.
ಇದೇ ಸಂದÀರ್ಭ ವೈದ್ಯಾಧಿಕಾರಿ ವಿಶ್ವನಾಥ್ ಸಿಂಪಿ, ವೈದ್ಯರಾದ ಹೇಮಪ್ರಿಯಾ, ರೇಣುಕಾ, ಅನಿಲ್ ದಾವನ್, ಜಿ.ಪಂ ಸದಸ್ಯ ಮೂಕೋಂಡ ಶಶಿ ಸುಬ್ರಮಣಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಟ್ರಪಂಡ ರಘುನಾಣಯ್ಯ ಮತ್ತಿತರರು ಉಪಸ್ಥಿತರಿದ್ದರು.