ವೀರಾಜಪೇಟೆ, ಅ. 9 : ಖಾಸಗಿ ವಿದ್ಯಾ ಸಂಸ್ಥೆಯ ಪ್ರಾಂಶುಪಾಲರೊಬ್ಬರು ಕಾವೇರಿ ಮಾತೆಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ಹಿಂದೂ ಪರ ಸಂಘಟಣೆಗಳು ಶಾಸಕರ ಕಚೇರಿಯಲ್ಲಿ ಆರ್ ಎಸ್ ಎಸ್ನ ತಾಲೂಕು ಸಂಚಾಲಕ ಕುಟ್ಟಂಡ ಪ್ರಿನ್ಸ್ ಗಣಪತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಾಂಶುಪಾಲ ಬಹಿರಂಗ ಕ್ಷಮೆ ಯಾಚಿಸಿದ ಘಟನೆ ನಡೆಯಿತು. ಗುರುವಾರ ನಡೆಸಲು ಉದ್ದೇಶಿಸಿದ ಪ್ರತಿಭಟನೆಯನ್ನು ಕೈಬಿಡಲಾಯಿತು.
ಸಂಘ ಪರಿವಾರ ಪದಾಧಿಕಾರಿಗಳು ಸೌಹಾದರ್Àವಾಗಿ ಸಮಸ್ಯೆ ಇತ್ಯರ್ಥಪಡಿಸಲು ಅಪರಾಹ್ನ 2 ಗಂಟೆಗೆ ಪ್ರಾಂಶುಪಾಲರನ್ನು ಕಚೇರಿಗೆ ಕರೆಸಿಕೊಂಡು ನಡೆದ ಘಟನೆಯ ಬಗ್ಗೆ ಕೂಲಂಕುಶ ಚರ್ಚೆ ನಡೆಯಿತು. ಪ್ರಾಂಶುಪಾಲ ಸ್ಪಷ್ಠಿಕರಣ ನೀಡಿ ತಾನು ಮೈಸೂರಿನಿಂದ ವರ್ಗವಾಗಿ ಬಂದಿದ್ದೇನೆ. ಇಲ್ಲಿನ ಧಾರ್ಮಿಕ ವಿಚಾರದ ಬಗ್ಗೆ ಅರಿವಿಲ್ಲದ ಕಾರಣ ಆಗಿರುವ ಪ್ರಮಾದಕ್ಕೆ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದರು. ಹಿಂದೂಗಳ ಧಾರ್ಮಿಕ ವಿಚಾರಗಳ ಬಗ್ಗೆ ಅಸಡ್ಡೆ ತೋರುವ ಇಬ್ಬರು ಉಪನ್ಯಾಸಕರುನ್ನು ಪದಾಧಿಕಾರಿಗಳು ತರಾಟೆಗೆ ತೆಗದುಕೊಂಡರು
ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಮೂಕೋಂಡ ಶಶಿ ಸುಬ್ರಮಣಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಟ್ರಪಂಡ ರಘು ನಾಣಯ್ಯ, ಸಂತ ಅನ್ನಮ್ಮ ಚರ್ಚ್ನ ಧರ್ಮಗುರು ಫಾ ಮದಲೈಮುತ್ತು, ದುರ್ಗಾ ವಾಹಿನಿ ಸಂಘಟಣೆಯ ಜಿಲ್ಲಾದ್ಯಕ್ಷೆ ಅಂಬಿಕಾ, ತಾಲೂಕು ವಿಎಚ್ಪಿ ಅಧ್ಯಕ್ಷ ಸಣ್ಣುವಂಡ ಗಣೇಶ್, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧು ದೇವಯ್ಯ, ನಗರ ಬಿಜೆಪಿ ಅಧ್ಯಕ್ಷ ಅನಿಲ್ ಮಂದಣ್ಣ ಉಪಸ್ಥಿತರಿದ್ದರು.